ADVERTISEMENT

ಮೀನಮೇಷ

ಕೊತ್ತೀಪುರ ಜಿ ಶಿವಣ್ಣ, ರಾಮನಗರ
Published 26 ಜನವರಿ 2015, 19:30 IST
Last Updated 26 ಜನವರಿ 2015, 19:30 IST

ಡಾ.ಸರೋಜಿನಿ ಮಹಿಷಿ ಇನ್ನಿಲ್ಲ. ಕನ್ನಡಿಗರ ಉದ್ಯೋಗ­ದಾಸೆಯ ಬೆಳ್ಳಿಕಿರಣವಾಗಿದ್ದ ಅವರ ವರದಿ ಸಲ್ಲಿಕೆಯಾಗಿ ಮೂರು ದಶಕಗಳು ಉರುಳಿದರೂ ಸಂಪೂರ್ಣ ಅನುಷ್ಠಾನ ಭಾಗ್ಯ­ವಿಲ್ಲ­ದಿರುವುದು ಶೋಚ­ನೀಯ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ ಜೀವನ ಭದ್ರತೆ ಒದಗಿಸಲು ಸರ್ಕಾರ ಮೀನ­ಮೇಷ ಎಣಿಸು­ತ್ತಿರುವುದು ಸೋಜಿಗ.

ಕರ್ನಾಟಕದಲ್ಲಿ ನಿಜಕ್ಕೂ ಕನ್ನಡಿಗರ ಆಡಳಿತ­ವಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಕನ್ನಡಿಗರ ಸರ್ಕಾರ ಇದ್ದಿದ್ದರೆ ಖಂಡಿತ ಈ ವರದಿಯನ್ನು ಜಾರಿಗೊಳಿಸುತ್ತಿತ್ತು. ಸರ್ಕಾರ ತನ್ನ ಎಡಬಿಡಂಗಿ ಧೋರಣೆಯಿಂದ ಕನ್ನಡಿಗರನ್ನು ಅತಂತ್ರಗೊಳಿಸಿದೆ. 
ಸರ್ಕಾರ ಅನ್ಯರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುತ್ತಿದೆ.  ನೆಲ, ಜಲ, ವಿದ್ಯುತ್ ಕೊಟ್ಟು, ತೆರಿಗೆ ವಿನಾಯಿತಿ ನೀಡಿ, ಅವರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕರುಣಿಸುತ್ತದೆ. ಆದರೆ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಹಿಂದೆ­ಮುಂದೆ ನೋಡುತ್ತಿದೆ. ಇದು ಬಹುದೊಡ್ಡ ಅಪಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.