ADVERTISEMENT

‘ಪಂಚಭೂತಗಳಲ್ಲಿ ಲೀನ’ ಎಷ್ಟು ಸರಿ?

ಎಸ್.ರವಿ.
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಭೂಮಿ, ಜಲ, ಅಗ್ನಿ, ವಾಯು, ಆಕಾಶ ಇವುಗಳನ್ನು ಪಂಚಭೂತಗಳೆನ್ನುತ್ತಾರೆ. ಯಾವುದೇ ವ್ಯಕ್ತಿಯ ಅಂತ್ಯ ಸಂಸ್ಕಾರ ಆದ ನಂತರ ಪತ್ರಿಕೆಗಳು ‘ದೇಹ ಪಂಚಭೂತಗಳಲ್ಲಿ ಲೀನ’ ಎಂದು ವರದಿ ಮಾಡುತ್ತವೆ. ಆದರೆ ದೇಹ ದಹನವಾದ ನಂತರ ಪಂಚಭೂತಗಳಲ್ಲಿ ನಾಲ್ಕು ಅಂಶಗಳಲ್ಲಿ ಮಾತ್ರ ಲೀನವಾಗುತ್ತದೆ. ಭೂಮಿ, ಅಗ್ನಿ, ವಾಯು ಮತ್ತು ಆಕಾಶ. ಚಿತಾ ಭಸ್ಮವನ್ನು ನೀರಿನಲ್ಲಿ ಬಿಟ್ಟಾಗಲೇ ಅದು ಪಂಚಭೂತಗಳಲ್ಲಿ ಲೀನವಾಗುವುದು. ಆದ ಕಾರಣ ಚಿತಾ ಭಸ್ಮವನ್ನು ನೀರಿನಲ್ಲಿ ಬಿಡುವವರೆಗೆ ‘ಪಂಚಭೂತಗಳಲ್ಲಿ ಲೀನ’ ಎಂಬ ಪದಪ್ರಯೋಗ ಸೂಕ್ತವಲ್ಲ ಎನ್ನುವುದು ನನ್ನ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.