ADVERTISEMENT

‘ಯಮರಾಜ ಸಹೋದರ!’

​ಸಿ.ಪಿ.ಕೆ.ಮೈಸೂರು
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

‘ಭಾರತ ಮೂಲದ ವೈದ್ಯ ‘ಡಾ. ಡೆತ್‌’ ಬಂಧನ’ (ಪ್ರ.ವಾ., ಜ. 19). ಇದು ಅಮೆರಿಕದಲ್ಲಿ ನಡೆದಿ ರುವ ಘಟನೆ (ಆ ವೈದ್ಯ 36 ರೋಗಿಗಳ ಮರಣಕ್ಕೆ ಕಾರಣನಾಗಿದ್ದನಂತೆ).

ಭಾರತದಲ್ಲೆ ಎಷ್ಟೋ ಮಂದಿ ‘ಡಾ. ಡೆತ್‌’ಗಳಿಲ್ಲವೆ? ಅವರ ‘ಪ್ರತಾಪ’ದ ಸುದ್ದಿ ಗಳು ನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲವೆ?
ಈ ಪ್ರಾಚೀನ ‘ಪ್ರಾರ್ಥನೆ’ ಸ್ಮರಣೀಯ: ‘ವೈದ್ಯ ರಾಜ ನಮಸ್ತುಭ್ಯಂ, ಯಮರಾಜ ಸಹೋದರ!’ ಯಮಸೋದರ ಅಥವಾ ಯಮಕಿಂಕರನಾಗುವು ದಿರಲಿ, ಸ್ವತಃ ಯಮನೇ ಆಗಬಹುದು, ವೈದ್ಯ ಮಹಾಶಯ! (ಆಗದಿರಲಿ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.