ADVERTISEMENT

20– 20 ಮ್ಯಾಚ್!

ಪತ್ತಂಗಿ ಎಸ್.ಮುರಳಿ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಬೆಂಗಳೂರಿನ ಓ ಮತದಾರರೆ, ನೋಡಲು ಮರೆಯದಿರಿ ಸದ್ಯದಲ್ಲೇ ನಡೆಯಲಿದೆ ಬಿಬಿಎಂಪಿ 20– 20 ಮ್ಯಾಚ್. ಕೆಲ ವರ್ಷಗಳ ಹಿಂದೆ ಅಖಿಲ ಕರ್ನಾಟಕ ಮಟ್ಟದಲ್ಲಿ ನಡೆದ ರೀತಿಯಲ್ಲಿ ನಮ್ಮ ಬೆಂಗಳೂರು ಜಿಲ್ಲಾ ಮಟ್ಟದ ಸ್ಪರ್ಧೆ. ಸಿ- ಕ್ಲಬ್, ಜೆ- ಕ್ಲಬ್ ಮತ್ತು ಬಿ- ಕ್ಲಬ್ ತಂಡಗಳು  ಮ್ಯಾಚ್‌ನಲ್ಲಿ ಪಾಲ್ಗೊಳ್ಳಲಿವೆ.

ಕ್ಲಬ್‌ಗಳ ಮಾಲೀಕರು ಹಿಂದಿನವರೇ. ಆದರೆ,  ನಾಯಕರು ಮಾತ್ರ ಬದಲಾಗಿದ್ದಾರೆ. ಕೆಲ ಆಟಗಾರರ ಹರಾಜು ಪ್ರಕ್ರಿಯೆ ಚಾಲನೆಯಲ್ಲಿದೆ. ಪ್ರಕ್ರಿಯೆ ಮುಗಿದ ಕೂಡಲೇ ಆಟ ಆರಂಭ. ಮೊದಲು ಯಾರು ಬ್ಯಾಟ್ ಮಾಡುತ್ತಾರೆ ಎಂಬುದೇ ಸದ್ಯದ ಕುತೂಹಲ. ಬೆಂಗಳೂರಿನ ಮತದಾರರಿಗೆ ಜೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.