ADVERTISEMENT

ಅಲ್ಲು ಜತೆಯಾಗಿ ರಶ್ಮಿಕಾ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 9:02 IST
Last Updated 20 ಜೂನ್ 2017, 9:02 IST
ರಶ್ಮಿಕಾ, ಚಿತ್ರ: ಕೆ.ಎನ್.ನಾಗೇಶ್‌ಕುಮಾರ್
ರಶ್ಮಿಕಾ, ಚಿತ್ರ: ಕೆ.ಎನ್.ನಾಗೇಶ್‌ಕುಮಾರ್   

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ’ ಚಿತ್ರಕ್ಕೆ ಚಂದನವನದ ಚೆಲುವೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರಾ?

ಹೌದು ಎನ್ನುತ್ತವೆ ಸುದ್ದಿಮೂಲಗಳು. ‘ನಾ ಪೇರು ಸೂರ್ಯ’ ಚಿತ್ರಕ್ಕಾಗಿ ಈಗಾಗಲೇ ರಶ್ಮಿಕಾ ಅವರ ಫೋಟೊಶೂಟ್ ಮಾಡಲಾಗಿದ್ದು, ಬನ್ನಿ ಎನ್ನುವ ಪಾತ್ರಕ್ಕೆ ರಶ್ಮಿಕಾ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಯಶಸ್ವಿಯಾದ ನಂತರ ರಶ್ಮಿಕಾಗೆ ತೆಲುಗು, ತಮಿಳು ಸಿನಿಮಾ ಕ್ಷೇತ್ರಗಳಿಂದ ಸಿನಿಮಾಕ್ಕೆ ಬಹಳಷ್ಟು ಆಫರ್‌ಗಳು ಬರುತ್ತಿವೆಯಂತೆ.

ADVERTISEMENT

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಹೊಸ ಚಿತ್ರ ‘ಸಾಹೊ’ ತಾರಾಗಣದಲ್ಲೂ ರಶ್ಮಿಕಾ ಹೆಸರು ಕೇಳಿಬಂದಿತ್ತು. ಆದರೆ, ರಶ್ಮಿಕಾ ಸ್ಥಾನಕ್ಕೆ ಬೇರೊಬ್ಬರು ಆಯ್ಕೆಯಾದರು. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಅಭಿನಯಿಸುವ ಅದೃಷ್ಟ ರಶ್ಮಿಕಾಗೆ ಇದೆಯೇ ಕಾದು ನೋಡಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.