ADVERTISEMENT

ಡ್ರಾಕುಲಾ ಕಥೆ...

ಪೃಥ್ವಿರಾಜ್ ಎಂ ಎಚ್
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಡ್ರಾಕುಲಾ ಕಥೆ...
ಡ್ರಾಕುಲಾ ಕಥೆ...   

ಕಾಲಿವುಡ್‌ ಕಾಂಚಾನ, ಸ್ಯಾಂಡಲ್‌ವುಡ್‌ ನಾಗವಲ್ಲಿ ಪಾತ್ರಗಳಂತೆ  ಹಾಲಿವುಡ್‌ನಲ್ಲೂ ಇದೇ ರೀತಿ ರಕ್ತ ಹೀರುವ ದೆವ್ವದ ಪಾತ್ರವಾಗಿ ಜನಪ್ರಿಯತೆ ಪಡೆದ ಪಾತ್ರವೇ ಡ್ರಾಕುಲಾ.

ಈ ಹೆಸರೂ ಕೇಳದ ಸಿನಿರಸಿಕರು ಇಲ್ಲವೆಂದೇ ಹೇಳಬಹುದು. ಇಂತಹ ಭಯಾನಕ ಪಾತ್ರ ಸೃಷ್ಟಿಯ ಹಿಂದೆ ಒಂದು ರೋಚಕ ಕಥೆ ಇದೆ. ಅದೇನು ಅಂತಿರಾ.? ಹಾಗಾದ್ರೆ ಈ ಕತೆ ಓದಿ.

ಹಿಂದೆ ನ್ಯೋರೋಮೇನಿಯಾ ದೇಶವನ್ನು ಅರಜಾಕತೆಯಿಂದ ಆಳುತ್ತಿದ್ದ ದೊರೆಯೇ ಡ್ರಾಕುಲ್‌. ಇವನ ನಿರಂಕುಶ ಪ್ರಭುತ್ವದ ವಿರುದ್ಧ ದಂಗೆ ಎದ್ದ ಜನ ಒಂದು ದಿನ ಕೋಟೆಗೆ ನುಗ್ಗಿ ಡ್ರಾಕುಲ್‌ನನ್ನು ಭಯಂಕರವಾಗಿ ಕೊಲೆ ಮಾಡುತ್ತಾರೆ.

ಈ ಘಟನೆ ನಡೆದ 10 ವರ್ಷದ ನಂತರ ಡ್ರಾಕುಲ್‌ನ ಮಗ ವ್ಲಾಡ್‌–3 ನ್ಯೂರೋಮೇನಿಯಾದ ರಾಜನಾಗುತ್ತಾನೆ.
ಇವನು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಮಾಡಿದ ಮೊದಲ ಕೆಲಸವೆಂದರೆ ಅವನ ಅಪ್ಪನನ್ನು ಕೊಂದವರನ್ನು ಆಸ್ಥಾನಕ್ಕೆ ಎಳೆದುತಂದು  ಮುಳ್ಳಿನ ಕಂಬಿಗಳ ಮೇಲೆ ಕೂರಿಸಿ ತೀರಾ ಹಿಂಸಾತ್ಮಕವಾಗಿ  ಹತ್ಯೆ ಮಾಡಿದ. ಇವನ ಹಿಂಸಾಯಾತ್ರೆ ಇಲ್ಲಿಗೆ ಮುಗಿಯುವುದಿಲ್ಲ.

ತನ್ನ ರಾಜ್ಯದ ಶತ್ರುಗಳನ್ನೆಲ್ಲಾ ಸೆರೆಹಿಡಿದು ತಂದು ಚಿತ್ರಹಿಂಸೆ ನೀಡಿ ಕೊಲ್ಲುವುದಲ್ಲದೇ ಅವರ ರಕ್ತವನ್ನು ಒಂದು ಪಾತ್ರೆಗೆ ತುಂಬಿಸಿಕೊಂಡು ಪ್ರತಿದಿನ ಬ್ರೆಡ್‌ ಜೊತೆ ನಂಜಿಕೊಂಡು ತಿನ್ನುತ್ತಿದ್ದನಂತೆ!

ಹೀಗೆ ನೆತ್ತರಕೂಳು ತಿನ್ನುತ್ತಿದ್ದ ರಾಜನಾಗಿ ವ್ಲಾಡ್‌–3 ಚರಿತ್ರೆಯಲ್ಲಿ ದಾಖಲಾದ. ಇವನ ಕಥೆಯನ್ನು ಓದಿದ ಕಾದಂಬರಿಕಾರ ಬ್ರಾಮ್‌ ಸ್ಟೋಕರ್ ಈಗಾಗಲೇ ತಾನು ಬರೆಯುತ್ತಿದ್ದ ಹಿಂಸಾತ್ಮಕ ಹಿನ್ನೆಲೆಯ ಕಾದಂಬರಿಯೊಂದಕ್ಕೆ ವ್ಲಾಡ್‌–3ನ ಹೆಸರನ್ನೇ ಇಡಬೇಕೆಂದು ಯೋಚಿಸಿದ. ಆದರೆ ಅವನ ಹೆಸರನ್ನು ನೇರವಾಗಿ ಬಳಸುವ ಬದಲು ಅವನು ಡ್ರಾಕುಲ್‌ನ ಮಗನದ್ದಾರಿಂದ ಅವನ ಕಾದಂಬರಿಗೆ ಡ್ರಾಕುಲಾ ಎಂದು ಹೆಸರಿಟ್ಟ.

ಇದೇ ಪ್ರೇರಣೆಯಿಂದ ಚಿತ್ರವೂ ತಯಾರಾಯಿತು. ಡ್ರಾಕುಲಾ ಪಾತ್ರ ಭಯಕ್ಕೆ ಪರ್ಯಾಯ ಪದವಾಗಿ ಕುಖ್ಯಾತಿ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.