ADVERTISEMENT

‘ದ ಎಮೋಜಿ ಮೂವಿ’ ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
‘ದ ಎಮೋಜಿ ಮೂವಿ’ ಟ್ರೇಲರ್ ಬಿಡುಗಡೆ
‘ದ ಎಮೋಜಿ ಮೂವಿ’ ಟ್ರೇಲರ್ ಬಿಡುಗಡೆ   

ನಮ್ಮ ಫೋನ್‌, ಕಂಪ್ಯೂಟರ್‌ನಲ್ಲಿ ಇರುವ ಎಮೋಜಿ ನಿಜ ಜೀವನದಲ್ಲಿ ಬದುಕಿದ್ದರೆ ಹೇಗಿರುತ್ತಿತ್ತು. ಕೋಪಗೊಂಡ ಮುಖ, ಕೇಕೆ ಹಾಕಿ ನಗುವ ಮುಖ, ಹಾಯ್ ಎನ್ನುವ ಹಸ್ತ... ಇಂಥ ಚಿಹ್ನೆಗಳಿಗೆ ಜೀವ ಬಂದು ಫೋನಿನೊಳಗೆಲ್ಲಾ ಓಡಾಡಿದರೆ ಹೇಗಿರುತ್ತದೆ. ಹೀಗೊಂದು ಕಲ್ಪನೆಯ ‘ದ ಎಮೋಜಿ ಮೂವಿ’ ಅಂಥ ಸಿನಿಮಾವೊಂದು ಬರುತ್ತಿದೆ.

ಎಮೋಜಿಗಳಿಗೆ ಜೀವಕೊಟ್ಟು, ಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿರುವವರು ಟೋನಿ ಲಿಂಡಿಸ್. ಅಮೆರಿಕ ಮೂಲದ ಟೋನಿ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು. ವಿಡಿಯೊ ವೈರಲ್ ಆಗಿದೆ. ಸೋನಿ ಪಿಕ್ಚರ್ಸ್‌ ಅನಿಮೇಷನ್ ಸಂಸ್ಥೆ 3ಡಿ ಅನಿಮೇಷನ್‌ನಲ್ಲಿ ಸಿನಿಮಾವನ್ನು ನಿರ್ಮಿಸಿದೆ.

ಫೋನಿನೊಳಗೆ ಒಂದು ಪುಟ್ಟ ಜಗತ್ತು. ಒಂದೊಂದು ಆ್ಯಪ್ ಒಂದೊಂದು ನಗರ. ಎಮೊಜಿ ಎನ್ನುವುದು ಒಂದು ಊರು. ಅಲ್ಲಿ ಎಮೋಜಿ ಚಿಹ್ನೆಗಳೆಲ್ಲಾ ಮನುಷ್ಯರಂತೆ ಓಡಾಡುತ್ತಿರುತ್ತಾವೆ. ಅಲ್ಲೂ ಟ್ರಾಫಿಕ್‌ ಸಮಸ್ಯೆ ಇದೆ. ಪ್ರೀತಿ–ಪ್ರಣಯ, ಸಾಹಸ ಕಥೆಗಳೂ ಇವೆ.

ADVERTISEMENT

ಫೋನಿನ ಸಮಸ್ಯೆಯಿಂದಾಗಿ ಎಮೋಜಿ ಚಿಹ್ನೆ ಸರಿಯಾಗಿ ಮೆಸೇಜ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಮೂರು ಎಮೋಜಿ ಗೆಳೆಯರು ಫೋನಿನ ಸಾಫ್ಟ್‌ವೇರ್‌ನಲ್ಲಿ ಎಲ್ಲಿ ಸಮಸ್ಯೆಯಾಗಿದೆ ಎಂದು ಹುಡುಕಿಕೊಂಡು ಹೋಗುತ್ತಾರೆ. ಎಮೊಜಿ ಅಪ್ಲಿಕೇಷನ್‌ನಿಂದ ಹೊರಬಂದು ಕ್ಯಾಂಡಿಕ್ರಷ್ ಆ್ಯಪ್‌ನೊಳಗೆ ಹೋಗುವುದು ಅಲ್ಲಿ ಸಮಸ್ಯೆಯನ್ನು ಪರಿಹಾರ ಮಾಡುವುದು. ಹೀಗೆ ಹಲವು ಸಾಹಸ ಯಾತ್ರೆಗಳ ಗುಚ್ಛ ಸಿನಿಮಾದ ಟ್ರೇಲರ್‌ನಲ್ಲಿ ಇದೆ.

ಪ್ರಸಿದ್ಧ ಹಾಲಿವುಡ್‌ ನಟರಾದ ಟಿ.ಜೆ. ಮಿಲ್ಲರ್, ಅನ್ನಾ ಫರಿಸ್, ಜೇಮ್ಸ್ ಕಾರ್ಡೆನ್, ಪ್ಯಾಟ್ರಿಕ್ ಸ್ಟೀವರ್ಟ್, ಮಾಯಾ ರುಡಾಲ್ಫ್, ಸ್ಟೀವನ್ ರೈಟ್, ರಾಬ್ ರಿಗ್ಲೆ, ಜೆನ್ನಿಫರ್ ಕೂಲಿಡ್ಜ್, ಜೇಕ್ ಟಿ. ಆಸ್ಟಿನ್, ಸೋಫಿಯಾ ವೆರ್ಗರಾ ಮತ್ತು ಕ್ರಿಸ್ಟಿನಾ ಅಗುಲೆರಾ ಸಿನಿಮಾದ ಎಮೋಜಿ ಪಾತ್ರಗಳಿಗೆ ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.