ADVERTISEMENT

ನರ್ಗಿಸ್‌ ಚರ್ಮದ ಹೊಳಪಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ನಿಮ್ಮ ಚರ್ಮ ಕಾಂತಿಯುಕ್ತ ವಾಗಬೇಕೆಂದರೆ ಸೂಕ್ತ ಮಾಯಿಶ್ಚರೈಸರ್‌ ಬಳಕೆ ಅತ್ಯಗತ್ಯ ಎನ್ನುತ್ತಾರೆ ನರ್ಗಿಸ್‌ ಫಕ್ರಿ. ರಾಕ್‌ ಸ್ಟಾರ್‌ನ ನಟಿ ಚೆಲುವೆ ಈಚೆಗೆ ಹಿಂದುಸ್ತಾನ್‌ ಯುನಿಲಿವರ್‌ ಲಿ.ನ ವ್ಯಾಸಲಿನ್‌ ಪ್ರಚಾರಕ್ಕೆ ಬಂದ ವೇಳೆ ತನ್ನ ಚರ್ಮದ ಹೊಳಪಿಗೆ ಮಾಯಿಶ್ಚರೈಸರ್‌ ಕಾರಣ ಎಂದೂ ಹೇಳಿದ್ದಾರೆ.

ಚರ್ಮದ ಆರೋಗ್ಯಕ್ಕೆ ಚರ್ಮದಲ್ಲಿ ತೇವಾಂಶವನ್ನು ಉಳಿಸುವುದು ಅತ್ಯಗತ್ಯವಾಗಿದೆ. ಇದರಿಂದ ಚರ್ಮವು ಅತಿ ಕೋಮಲವಾಗುತ್ತದೆ. ಚರ್ಮಕ್ಕೆ ಮೃದುತ್ವ ಬರುತ್ತದೆ. ಚಳಿಗಾಲದಲ್ಲಿ ಈ ಮುಂಚಿನಿಂದಲೂ ವ್ಯಾಸಲಿನ್‌ನ ಬಳಕೆ ಭಾರತದಲ್ಲಿ ಇದ್ದೇ ಇದೆ. ಆದರೆ ಚರ್ಮದ ಆರೋಗ್ಯಕ್ಕೆ ಹೊರ ಹೋಗುವ ಮುನ್ನ ಮಾಯಿಶ್ಚರೈಸರ್‌ ಬಳಸಲೇಬೇಕು. ಬಾಡಿ ಲೋಷನ್‌ಗಳು ಚರ್ಮದ ತೇವಾಂಶವನ್ನು ಕಾಪಾಡುತ್ತವೆ. ಚರ್ಮ ಹೊಳೆಯುತ್ತದೆ. ಜೊತೆಗೆ ಕೋಮಲತ್ವವೂ ಹೆಚ್ಚುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.