ADVERTISEMENT

ನೂಡಲ್ ಮಾಡುವ ರೋಬೊ

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ನೂಡಲ್ ಮಾಡುವ ರೋಬೊ
ನೂಡಲ್ ಮಾಡುವ ರೋಬೊ   

ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಹೋಗುತ್ತಿದ್ದರೆ ಸಂಸ್ಥೆ ಏನು ಮಾಡಬಹುದು? ಅದರ ಹಿಂದಿನ ಕಾರಣ ತಿಳಿದುಕೊಂಡು ಪರಿಹಾರಕ್ಕೆ ಮುಂದಾಗಬಹುದು. ಆದರೆ ಚೀನಾದ ಶಾಂಕ್ಸಿಯಲ್ಲಿನ ಕೃಷಿ ವಿಶ್ವವಿದ್ಯಾಲಯ, ಇದೇ ಕೆಲಸವನ್ನು ಬೇರೆ ರೀತಿ ಮಾಡಿದೆ. ನೂಡಲ್‌ ತಯಾರಿಸುವ ರೋಬೊ ಅನ್ನು ಕಾಲೇಜಿನಲ್ಲಿ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ.

ಈ ರೋಬೊ ಹೆಸರು ಶೆಫ್‌ಬಾಟ್. ಶೆಫ್‌ ರೀತಿ ಟೋಪಿ, ಹೈಜೀನ್ ಮಾಸ್ಕ್ ತೊಟ್ಟಿರುವ ಈ ರೋಬೊ ಬಳಿ ಎರಡು ಚಾಕುಗಳಿವೆ. ನೂಡಲ್‌ ತಯಾರಿಸುವ ಹಿಟ್ಟನ್ನು ಪಟ ಪಟ ಕತ್ತರಿಸಿ ನೂಡಲ್‌ ಎಳೆಯನ್ನು ಮಾಡುವುದೇ ಇದರ ಕೆಲಸ. ಈ ರೋಬೊ ವೈಖರಿ ನೋಡಲೆಂದೇ ಕೃಷಿ ವಿ.ವಿ.ಯ ಕೆಫೆಟೇರಿಯಾಗೆ ವಿದ್ಯಾರ್ಥಿಗಳು ಹಿಂಡುಹಿಂಡಾಗಿ ಬರುತ್ತಿದ್ದಾರೆ. ಇದರಿಂದ ಹಾಜರಾತಿಯೂ ಹೆಚ್ಚಿದೆಯಂತೆ. ‘ಡಯೋ ಕ್ಷಿಯೊ ಮಿಯಾನ್‌’ ಚೀನಾದ ವಿಶೇಷ ಖಾದ್ಯ.

ಇದನ್ನು ನೈಫ್ ಕಟ್ ನೂಡಲ್ಸ್‌ ಎಂದೂ ಕರೆಯುತ್ತಾರೆ. ಈ ರೋಬೊ ನಿಮಿಷಕ್ಕೆ 340 ಕಟ್‌ಗಳನ್ನು ಮಾಡಬಲ್ಲದು. 400 ಕಪ್ ನೂಡಲ್‌ ಅನ್ನೂ ನಿಮಿಷಗಳಲ್ಲೇ ತಯಾರಿಸುವುದಂತೆ. ವಿದ್ಯಾರ್ಥಿಗಳನ್ನು ಸೆಳೆಯಲು ಇನ್ನಷ್ಟು ತಂತ್ರಗಳನ್ನೂ ಸಂಸ್ಥೆ ಆಲೋಚಿಸುತ್ತಿದೆಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.