ADVERTISEMENT

ಪಿಚ್ಚರ್ ನೋಡಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ಪಿಚ್ಚರ್ ನೋಡಿ
ಪಿಚ್ಚರ್ ನೋಡಿ   

ಹಿಂದೂ ತರುಣ ಹಾಗೂ ಮುಸ್ಲಿಮ್‌ ಹುಡುಗಿಯ ನಡುವಣ ಪ್ರೇಮಕಥೆಯ ಸಿನಿಮಾ ‘ಮಳ್ಳಿ ಮಳ್ಳಿ ಇದಿ ರಾನಿ ರಾಜು’. 2015ರಲ್ಲಿ ತೆರೆಕಂಡ ಈ ತೆಲುಗು ಸಿನಿಮಾ, ಜಾತಿ–ಧರ್ಮದ ಚೌಕಟ್ಟುಗಳನ್ನು ಮೀರಿದ ಪ್ರೇಮದ ಔನ್ನತ್ಯವನ್ನು ಪ್ರತಿಪಾದಿಸುವ ಕಥೆ ಒಳಗೊಂಡಿದೆ.

ರಾಮರಾಜು ಎನ್ನುವ ಅಥ್ಲಿಟ್‌ ಹಾಗೂ ನಾಜಿರಾ ಎನ್ನುವ ಸಂಗೀತಪ್ರಿಯೆಯ ನಡುವೆ ಪ್ರೇಮ ಅಂಕುರಗೊಂಡು, ಇನ್ನೇನು ಎಲ್ಲವೂ ಸುಖಾಂತ್ಯ ಎನ್ನುವಾಗ ಇಬ್ಬರೂ ದೂರವಾಗುತ್ತಾರೆ. ಈ ಇಬ್ಬರೂ ದೂರವಾಗಲಿಕ್ಕೆ ಕಾರಣಗಳೇನು? ಅವರ ಪ್ರೇಮ ಹುಸಿಗೊಂಡಿತೆ? ಎನ್ನುವ ಸರಳ ಪ್ರಶ್ನೆಗಳಾಚೆಗೆ ಸಿನಿಮಾ ನೋಡುಗರನ್ನು ಒಯ್ಯುತ್ತದೆ.

ಸಿನಿಮಾವನ್ನು ನೋಡಲು ಮತ್ತೊಂದು ಕಾರಣ ನಿತ್ಯಾ ಮೆನನ್. ಒಂದು ಸುಂದರ ಭಾವಗೀತೆಯಂತೆ ನೋಡುಗರನ್ನು ಆವರಿಸಿಕೊಳ್ಳುವ ನಿತ್ಯಾ ಬೆರಗು ಹುಟ್ಟಿಸುವಂತೆ ನಟಿಸಿದ್ದಾರೆ. ರಾಮರಾಜು ಪಾತ್ರದಲ್ಲಿ ಶರ್ವಾನಂದ್‌ ನಟನೆಯೂ ಚೆನ್ನಾಗಿದೆ. ಕ್ರಾಂತಿ ಮಾಧವ್‌ ನಿರ್ದೇಶನದ, ಎರಡು ಭಾಗಗಳಲ್ಲಿ ಇರುವ ಈ ಚಿತ್ರವನ್ನು goo.gl/PjYUJN ಹಾಗೂ goo.gl/g2eJ9R ಕೊಂಡಿಗಳನ್ನು ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.