ADVERTISEMENT

ಪುಟ್ಟ-ಪುಟ್ಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ಪುಟ್ಟ-ಪುಟ್ಟಿ
ಪುಟ್ಟ-ಪುಟ್ಟಿ   

–ಮಾನಸಾ ಹೆಗಡೆ

*

ಪೇರಲೆ ಮರದಿ
ಹೊಳೆವ ಹಣ್ಣ
ಪುಟ್ಟ-ಪುಟ್ಟಿ ಕಂಡರು|

ADVERTISEMENT


ತನಗೆ ಹಣ್ಣು
ಬೇಕೇ ಬೇಕು
ಎನುತ ಪುಟ್ಟಿ ಅತ್ತಳು

ಹೇಗೋ ಏನೋ
ನಮ್ಮ ಪುಟ್ಟ
ಮರವ ಹತ್ತಿ ನಿಂತನು
ಅಂತೂ ಇಂತೂ
ಚಂದದ ಹಣ್ಣ
ಕೈಲಿ ಹಿಡಿದು ಬಿಟ್ಟನು|

ಉದ್ದ ಲಂಗವ
ಮಡಿಲು ಮಾಡಿ
ಪುಟ್ಟಿ ಕೆಳಗೆ ನಿಂತಳು
ಪುಟ್ಟನೆಸೆದ
ಹಣ್ಣ ಹಿಡಿದು
ಖುಷಿಯು ಆಗಿ ಕುಣಿದಳು|

ಮೇಲೆ ಇದ್ದ
ಹಣ್ಣು ಕೈಗೆ
ಬಂದ ಖುಷಿಯು ಪುಟ್ಟಿಗೆ
ಎಸೆದ ಹಣ್ಣು
ಗಾಯವಿರದೇ
ನಗುವ ಬೆರಗು ಪುಟ್ಟಗೆ|

ಕೂಡಿ ಕೊಯ್ದ
ಹಂಚಿ ತಿಂದ
ಹಣ್ಣು ರುಚಿ ಎನಿಸಿತು
ಅಳುವ ಪುಟ್ಟಿ
ಮುಖದ ತುಂಬ
ಖುಷಿಯ ನಗೆ ಮೂಡಿತು|

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.