ADVERTISEMENT

ಬ್ಲೂಬೆರಿ ತಿನ್ನಿ ಬುದ್ಧಿ ಬರುತ್ತೆ!

ಆರೋಗ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಬ್ಲೂಬೆರಿ ತಿನ್ನಿ ಬುದ್ಧಿ ಬರುತ್ತೆ!
ಬ್ಲೂಬೆರಿ ತಿನ್ನಿ ಬುದ್ಧಿ ಬರುತ್ತೆ!   

ವಯಸ್ಸಾದಂತೆ ದೇಹದೊಂದಿಗೆ ಮನಸ್ಸು ಮಾಗುತ್ತದೆ. ಹೀಗಾಗಿ ಹೆಚ್ಚಿನವರಲ್ಲಿ ಮಿದುಳು ಮಂದಗತಿಯಲ್ಲಿ ಕೆಲಸ  ಮಾಡಲಾರಂಭಿಸುತ್ತದೆ. ಆದರೆ ಹೊಸ ಅಧ್ಯಯನದ ಪ್ರಕಾರ ವಯಸ್ಸಿನ ಕಾರಣದಿಂದ ಉಂಟಾಗುವ ಮಿದುಳು ಸಂಬಂಧಿ ಸಮಸ್ಯೆಗೆ ಬ್ಲೂಬೆರಿ ಸೇವನೆ ಉತ್ತಮ ಪರಿಹಾರ.

ಪ್ರತಿನಿತ್ಯ 30 ಎಂಎಲ್‌ನಷ್ಟು ಸಾಂದ್ರೀಕೃತ ಬ್ಲೂಬೆರಿ ಹಣ್ಣಿನ ರಸವನ್ನು ಸೇವಿಸಿದರೆ ವಯಸ್ಕರಲ್ಲಿ ಮಿದುಳಿನ ಶಕ್ತಿ ವೃದ್ಧಿಸುತ್ತದೆ. ಸುಮಾರು 65–77 ವಯೋಮಾನದ ಆರೋಗ್ಯವಂತರು ನಿತ್ಯ ಬ್ಲೂಬೆರಿ ಹಣ್ಣಿನ ರಸವನ್ನು ಸೇವಿಸಿದ್ದರಿಂದ ಅವರಲ್ಲಿ ಅರಿವಿನ ಕ್ರಿಯೆ, (ಕಾಗ್ನಿಟಿವ್‌ ಫಂಕ್ಷನ್‌), ಮಿದುಳಿಗೆ ರಕ್ತ ಪರಿಚಲನೆಯಲ್ಲಿ ಅಭಿವೃದ್ಧಿ ಉಂಟಾಗಿದೆ. ಅಲ್ಲದೆ ನೆನಪಿನ ಶಕ್ತಿಯೂ ವೃದ್ಧಿಸಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಬ್ಲೂಬೆರಿ, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ಉರಿಯೂತ ನಿರೋಧಕ ಲಕ್ಷಣಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ 30 ಎಂಎಲ್‌ನಷ್ಟು ಸಾಂದ್ರೀಕೃತ ಬ್ಲೂಬೆರಿ ಹಣ್ಣಿನ ರಸವನ್ನು 12 ವಾರ ನಿತ್ಯ ಸೇವಿಸಿದರೆ ಪರಿಣಾಮಕಾರಿ ಲಾಭವನ್ನು ಗುರುತಿಸಬಹುದು.

ADVERTISEMENT

**

ಬ್ಲೂಬೆರಿ ಲಾಭಗಳು

* ಬ್ಲೂಬೆರಿಯು ಮಿದುಳಿನಲ್ಲಿರುವ ಜೀವಕೋಶಗಳಲ್ಲಿ ಆಮ್ಲಜನಕ ಕೊರತೆ ಉಂಟಾಗದಂತೆ ಮಾಡುತ್ತದೆ. ಹೀಗಾಗಿ ಅರಿವಿನ ಕ್ರಿಯೆ ಹೆಚ್ಚುತ್ತದೆ.

* ಸೂರ್ಯನಿಂದ ಹೊರಬರುವ ವಿಕಿರಣಗಳಿಂದ  (ಅತಿನೇರಳೆ ಕಿರಣ) ರಕ್ಷಣೆ ನೀಡುವುದಲ್ಲದೆ ಆಮ್ಲಜನಕ ಕೊರತೆಯಿಂದ ರೆಟಿನಾಗಳಿಗೆ ಹಾನಿ ಉಂಟಾಗುವುದನ್ನೂ ತಡೆಗಟ್ಟುತ್ತದೆ.

* ಅತಿಯಾದ ವ್ಯಾಯಾಮದಿಂದಾಗಿ ಹಾನಿಗೊಳಗಾಗುವ ಮಾಂಸಖಂಡಗಳನ್ನು ದುರಸ್ತಿಗೊಳಿಸುತ್ತದೆ. ವ್ಯಾಯಾಮದ ಸಂದರ್ಭದಲ್ಲಿ ಉಂಟಾಗುವ ನೋವನ್ನೂ ಬ್ಲೂಬೆರಿಿ ಕಡಿಮೆಗೊಳಿಸಬಲ್ಲುದು.

* ಸ್ತನ, ಕರುಳು, ಪ್ರಾಸ್ಟೇಟ್‌ ಮತ್ತು ಅನ್ನನಾಳದ ಕ್ಯಾನ್ಸರ್‌ ಉಲ್ಬಣಗೊಳ್ಳುವುದನ್ನೂ ಬ್ಲೂಬೆರಿಿ ನಿಯಂತ್ರಿಸುತ್ತದೆ.

* ಜೀರ್ಣಶಕ್ತಿ ಹೆಚ್ಚಿಸುತ್ತದೆ. ಮೂತ್ರದ ಸೋಂಕಿಗೆ ಕಡಿವಾಣ ಹಾಡುತ್ತದೆ.

* ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ.

* ದೃಷ್ಟಿಯ ತೀಕ್ಷ್ಣತೆಯನ್ನು ಹೆಚ್ಚಿಸುವುದಲ್ಲದೆ ತ್ವಚೆಯ ಆರೋಗ್ಯವನ್ನೂ ಕಾಪಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.