ADVERTISEMENT

ಲ್ಯಾಕ್ಮೆ ಕೊಡುಗೆ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:30 IST
Last Updated 6 ಮಾರ್ಚ್ 2015, 19:30 IST
ಲ್ಯಾಕ್ಮೆ ಕೊಡುಗೆ
ಲ್ಯಾಕ್ಮೆ ಕೊಡುಗೆ   

ಮಹಿಳಾ ದಿನದಂದು ಲ್ಯಾಕ್ಮೆ ಸಲೂನ್, ತನ್ನ ಗ್ರಾಹಕರಿಗೆ ಧನ್ಯವಾದ ಹೇಳಲು ಮತ್ತು ತನ್ನ ಸುಂದರ ಗ್ರಾಹಕರನ್ನು ಗೌರವಿಸುವ ನಿಟ್ಟಿನಲ್ಲಿ ಲ್ಯಾಕ್ಮೆ ಫಾರ್ ಲೈಫ್ ಕಾರ್ಯಕ್ರಮ ಆಯೋಜಿಸಿತ್ತು. 

ಪ್ರತಿ ವರ್ಷ ಮಾರ್ಚ್ ೮ರಂದು ಲ್ಯಾಕ್ಮೆ ಸಲೂನ್ಸ್ ಎಂಟು ಅದೃಷ್ಟಶಾಲಿ ಗ್ರಾಹಕರಿಗೆ ಮುಂದಿನ ಎಂಟು ವರ್ಷಗಳ ಅಭಿನಂದನ ಪೂರ್ವಕ ಸಲೂನ್ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡುವ ಕಾರ್ಯಕ್ರಮ ಇದಾಗಿದೆ. ಅದೃಷ್ಟಶಾಲಿ ಎಂಟು ಮಹಿಳೆಯರು ಉಚಿತ ಸಲೂನ್ ಸೇವೆ ಪಡೆದುಕೊಳ್ಳಲಿದ್ದಾರೆ.

ಲ್ಯಾಕ್ಮೆ ಲೈಫ್ ಫಾರ್ ವಿಜೇತರಾದ ಅಶ್ವಿನಿ ಕೆ.ಟಿ ಅವರನ್ನು ನಟಿ ಐಂದ್ರಿತಾ ರೇ ಅಭಿನಂದಿಸಿದರು. ಲ್ಯಾಕ್ಮೆ ಫಾರ್ ಲೈಫ್ ವಿಜೇತೆ ಬೆಂಗಳೂರಿನ ಅಶ್ವಿನಿ ಕೆಟಿ ಮಾತನಾಡಿ, ‘ಈ ಸಲದ ಮಹಿಳಾ ದಿನ ನನ್ನ ಪಾಲಿಗೆ ಮರೆಯಲಾಗದ ದಿನ. ಎಂಟು ವಿಜೇತರಲ್ಲಿ ಒಬ್ಬಳಾಗಿರುವುದಕ್ಕೆ ಅತ್ಯಂತ ಸಂತಸವಾಗಿದೆ. ಹಲವು ವರ್ಷಗಳಿಂದ ನಾನು ಲ್ಯಾಕ್ಮೆ ಸಲೂನ್ ಗ್ರಾಹಕಿ. ಆಕರ್ಷಕ ಕೊಡುಗೆ ಮತ್ತು ಉತ್ತೇಜನಗಳಿಗೆ ಕಾಯುತ್ತಿರುತ್ತೇನೆ. ಈಗ ನಾನು ಮುಂದಿನ ಎಂಟು ವರ್ಷ ಚಿಂತಿಸುವ ಅಗತ್ಯವಿಲ್ಲ. ಈ ಗೌರವಕ್ಕಾಗಿ ನಾನು ಲ್ಯಾಕ್ಮೆಯನ್ನು ಅಭಿನಂದಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.