ADVERTISEMENT

ಸ್ತ್ರೀ ಜಗದಲಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST
ಸ್ತ್ರೀ ಜಗದಲಿ
ಸ್ತ್ರೀ ಜಗದಲಿ   

ಸಮಾಜದ ಮುನ್ನೆಲೆಯಲ್ಲಿ ಈ ಹಿಂದಿಗಿಂತಲೂ ಮಹಿಳೆಯರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷದಿಂದೀಚೆ ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಗಣನೀಯವಾಗಿ ಮಹಿಳೆಯರ ಸಂಖ್ಯೆ ಏರಿಕೆಯಾಗಿದೆ. ಭಾರತೀಯ ಉದ್ಯಮ ಕ್ಷೇತ್ರದಲ್ಲಂತೂ ಇವರ ಪಾಲು ಅಧಿಕ. ಅಂಥ ಕೆಲವು ಮಾಹಿತಿಗಳನ್ನು ಅಂಕಿ ಸಂಖ್ಯೆಗಳ ಮೂಲಕ ನೀಡುವ ಪ್ರಯತ್ನ ...

ಉದ್ಯೋಗಕ್ಕೂ ಸೈ
* ಕಳೆದ ಆರು ವರ್ಷಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇಕಡಾ 50ರಷ್ಟು ಹೆಚ್ಚಾಗಿದೆ ಎಂದು ‘ಮಾರ್ಕೆಟ್‌ಕಾಲ್ಸ್‌ ಟೆಕ್ನಾಲಜಿ ಸಂಸ್ಥೆ’ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. 

ಬಾಲ್ಯವಿವಾಹವೆಂಬ ತೊಡಕು
* ಮಕ್ಕಳ ಹಕ್ಕುಗಳ ಸಂಸ್ಥೆಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಬಾಲ್ಯವಿವಾಹವಾಗುತ್ತಿದ್ದಾರೆ. ಶೇಕಡಾವಾರು ಲೆಕ್ಕದಲ್ಲಿ ರಾಯಚೂರು–59.4, ಕೊಪ್ಪಳ 51.4, ವಿಜಯಪುರ 50.1, ಕಲಬುರ್ಗಿ 48.9, ಬಾಗಲಕೋಟೆ 48.3, ಬೆಳಗಾವಿ 43, ಬೀದರ್ 44.9, ಗದಗ 44.8, ಬಳ್ಳಾರಿ 35.2, ಚಾಮರಾಜನಗರ 34.3, ಧಾರವಾಡ 32.4, ಮಂಡ್ಯ 29.9,

ಬೆಂಗಳೂರು ಗ್ರಾಮಾಂತರ 28.4, ಚಿತ್ರದುರ್ಗ 26.6, ಕೋಲಾರ 26.3, ತುಮಕೂರು 25.7, ಮೈಸೂರು 25.2, ಹಾವೇರಿ 20.2, ಹಾಸನ 18.5, ದಾವಣಗೆರೆ 18.1, ಬೆಂಗಳೂರು ನಗರ 12.4, ಶಿವಮೊಗ್ಗ 8.9, ಉತ್ತರ ಕನ್ನಡ 7.8, ಚಿಕ್ಕಮಗಳೂರು 6.8, ದಕ್ಷಿಣ ಕನ್ನಡ 5.5, ಕೊಡಗು 2.2.

ಮಹಿಳೆಯರ ರಾಜಕೀಯ
ಭಾರತದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದದ್ದು 1951–52ರಲ್ಲಿ, ಕೊನೆಯದಾಗಿ ನಡೆದಿರುವುದು 2014ರಲ್ಲಿ. ಇದುವರೆಗೆ ನಡೆದಿರುವ ಲೋಕಸಭಾ ಚುನಾವಣೆಯ ಸಂಖ್ಯೆ 16. ಆ ಪೈಕಿ ಕೊನೆಯ ಎಂಟು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರು ಪಡೆದ ಸ್ಥಾನದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಪೊಲೀಸ್ ಇಲಾಖೆ
ಭಾರತದಲ್ಲಿ ಮೊದಲ ಪೊಲೀಸ್‌ ಅಧಿಕಾರಿಯನ್ನು ನೇಮಿಸಿದ್ದು ಕೇರಳದ ತಿರುವಾಂಕೂರು  ರಾಯಲ್‌ ಪೊಲೀಸ್‌ ಠಾಣೆಯಲ್ಲಿ. ಅದು 1933ರಲ್ಲಿ. ಮೊದಲ ಐಪಿಎಸ್‌ ಅಧಿಕಾರಿಯಾಗಿ ಕಿರಣ್ ಬೇಡಿ ನೇಮಕಗೊಂಡಿದ್ದು 1972ರಲ್ಲಿ.

ಗಂಡು ಹೆಣ್ಣು ಅನುಪಾತ
2011ರ ಜನಗಣತಿ ಪ್ರಕಾರ ದೇಶದಲ್ಲಿ ಪ್ರತಿ 113 ಗಂಡಿಗೆ 100 ಹೆಣ್ಣು ಮಕ್ಕಳಿದ್ದಾರೆ. ದೇಶದ ಅರ್ಧ ಜನಸಂಖ್ಯೆಯಷ್ಟು 24 ವರ್ಷದೊಳಗಿ ನವರೇ ಇದ್ದಾರೆ. ನಮ್ಮ ದೇಶದಲ್ಲಿ ಶೇ 47ರಷ್ಟು ಹೆಣ್ಣು ಮಕ್ಕಳು 18 ವರ್ಷ ತುಂಬುವುದರೊಳಗೇ ಮದುವೆಯಾಗುತ್ತಿದ್ದಾರೆ.

* ಈ ಬಾರಿಯ 16ನೇ ಲೋಕಸಭೆಯ 543 ಸದಸ್ಯರ ಪೈಕಿ ಮೊದಲ ಬಾರಿಗೆ 61 ಮಹಿಳೆಯರು ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.  ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಈಗ ಮಹಿಳೆಯ ಸಂಖ್ಯೆ ಅಧಿಕವಾಗಿದ್ದರೂ, ಇವರ ಸಂಖ್ಯೆ ಕೇವಲ ಶೇ 11.

ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು
ರಾಜ್ಯ: 
ತಮಿಳುನಾಡು, ಉತ್ತರ ಪ್ರದೇಶ, ಕೇರಳ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ
ನೋಂದಣಿತಘಟಕ: 9618, 7980, 5487, 4791, 4339, 3872, 3822, 2967
ಮಹಿಳಾ ಉದ್ಯಮಿ: 2930, 3180, 2135, 1618, 1394, 1538, 1026, 842
ಶೇಕಡಾವಾರು: 30.36, 39.84, 38.91, 33.77, 32.12, 39.72, 26.84, 28.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.