ADVERTISEMENT

ಹೀಗೆ ತಯಾರಾದರು ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಹೀಗೆ ತಯಾರಾದರು ಪ್ರಿಯಾಂಕಾ
ಹೀಗೆ ತಯಾರಾದರು ಪ್ರಿಯಾಂಕಾ   

ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ ಗಲ್ಲಿಯಲ್ಲಿ ಕಾಲಿರಿಸಿದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಅವರ ಸಿನಿಮಾ, ಮೇಕಪ್‌, ಇದೀಗ ಅವರ ದಿರಿಸಿನ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ.

‘ಮೆಟ್‌ ಗಾಲಾ 2017’ರಲ್ಲಿ ವಿಶ್ವದ ಅತಿ ಉದ್ದದ ಟ್ರೆಂಚ್‌ ಕೋಟ್‌ ಧರಿಸಿ ಸುದ್ದಿಯಾಗಿದ್ದಾರೆ ಪ್ರಿಯಾಂಕಾ. ಅಷ್ಟೇ ಅಲ್ಲ, ಈ ಕೋಟ್‌ ಧರಿಸಿ ಕಾರ್ಯಕ್ರಮಕ್ಕೆ ತೆರಳುವುದಕ್ಕೂ ಮುನ್ನ ಅವರು ಹೇಗೆ ತಯಾರಾದರು ಎನ್ನುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕುತ್ತಿಗೆಯಿಂದ ತಲೆಯ ಅರ್ಧ ಭಾಗದವರೆಗೆ ಚಾಚಿಕೊಂಡಿರುವ ಕಾಲರ್‌, ಅರ್ಧ ಎದೆ ಕಾಣುವಂತೆ ವಿನ್ಯಾಸ ಇರುವ ಉದ್ದದ ಕೋಟ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 

ADVERTISEMENT

ಕಂದು ಬಣ್ಣದ ಡಯಾನಾ ಹೆಸರಿನ ನಾಯಿ ಮರಿ ಎತ್ತಿಕೊಂಡ ಪ್ರಿಯಾಂಕಾ ತನ್ನನ್ನು ಪರಿಚಯಿಸಿಕೊಳ್ಳುತ್ತಾ, ಮೆಟ್‌ ಗಲಾ ಕಾರ್ಯಕ್ರಮಕ್ಕೆ ತೆರಳುವುದಾಗಿ ಪಿಸುಗುಡುತ್ತಾರೆ. ನಂತರ ಅವರು ಧರಿಸುವ ಉದ್ದದ ಕೋಟ್‌, ಬೆಳ್ಳಿ ಬಣ್ಣದ ದೊಡ್ಡ ದೊಡ್ಡ ಕಿವಿಯೋಲೆ, ಬ್ರೇಸ್‌ಲೈಟ್‌ಗಳು, ಅವರು ಕೊಂಡೊಯ್ಯುವ ಬ್ಯಾಗ್‌ಗಳನ್ನು ವಿಡಿಯೊದಲ್ಲಿ ಚಿತ್ರೀಕರಿಸಲಾಗಿದೆ.

‘ನಾನು ಅಮೆರಿಕದವಳಲ್ಲದಿದ್ದರೂ, ಪ್ರಖ್ಯಾತ ಅಮೆರಿಕ ಬ್ರ್ಯಾಂಡ್‌ನ ದಿರಿಸು ತೊಟ್ಟು ಈ ಕಾರ್ಯಕ್ರಮದಲ್ಲಿ ಬೆಕ್ಕಿನ ಹೆಜ್ಜೆ ಇಡಲು ತುಂಬಾ ಖುಷಿ ಎನಿಸುತ್ತಿದೆ’ ಎಂದೂ ಅವರು ಖುಷಿ ಹಂಚಿಕೊಂಡಿದ್ದಾರೆ.

ಮೇಕಪ್‌ ಮಾಡಿಕೊಂಡು ಉದ್ದದ ಕೋಟ್‌ ಧರಿಸಿ ಹೆಜ್ಜೆ ಇಡುತ್ತಾರೆ. ಅವರ ಅಭಿಮಾನಿ ಸಮೂಹವೇ ಅವರ ದಿರಿಸು ನೋಡಿ ಮೆಚ್ಚುಗೆಯಿಂದ ಶುಭಾಶಯ ಕೋರುತ್ತಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹು ಜನಪ್ರಿಯತೆ ಗಳಿಸಿದೆ. ಒಟ್ಟಿನಲ್ಲಿ ಪ್ರಿಯಾಂಕಾ ಏನೇ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಸುದ್ದಿ ಆಗುತ್ತಿರುವುದಕ್ಕೆ ಇದೂ ಒಂದು ಸಾಕ್ಷಿ.

ವಿಡಿಯೊ ನೋಡಲು: bit.ly/2p0oxKF

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.