‘ಝೀ ಸಿನಿ ಪ್ರಶಸ್ತಿ’ ಸಮಾರಂಭದಲ್ಲಿ 5 ನಿಮಿಷದ ನೃತ್ಯಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ₹5 ಕೋಟಿ ಸಂಭಾವನೆ ಪಡೆದಿರುವುದು ಬಾಲಿವುಡ್ ಗಲ್ಲಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.
ನಿಮಿಷಕ್ಕೆ ₹1 ಕೋಟಿಯಂತೆ 5 ನಿಮಿಷದ ನೃತ್ಯಕ್ಕೆ ₹5 ಕೋಟಿ ಬೇಡಿಕೆಯಿಟ್ಟಿದ್ದರು ಪ್ರಿಯಾಂಕಾ. ಝೀ ಕಂಪೆನಿಯು ಈ ಬೇಡಿಕೆಗೆ ಮಣಿದಿದೆ.
ಸದ್ಯ ಹಾಲಿವುಡ್ನಲ್ಲಿ ಬ್ಯುಸಿಯಾಗಿರುವ ಕ್ವಾಂಟಿಕೊ ನಟಿ ಮುಂಬೈಗೆ ಬಂದಾಗ ಹೊಸ ಬಾಲಿವುಡ್ ಸಿನಿಮಾಗಳಿಗೆ ಸಹಿ ಹಾಕಲಿದ್ದಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ. ಈ ಸಮಯದಲ್ಲಿ ಬಾಲಿವುಡ್ನ ಕೆಲ ಪ್ರಮುಖ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯಲಿದ್ದು, ಪ್ರಿಯಾಂಕಾ ಅವರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರೆ ಆ ಸಮಾರಂಭ ಮತ್ತಷ್ಟು ಕಳೆಗಟ್ಟುತ್ತದೆ. ಆದರೆ ಅವರ ದುಬಾರಿ ಸಂಭಾವನೆ ಕಾರ್ಯಕ್ರಮಗಳ ಬಜೆಟ್ ಏರುಪೇರು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.