ADVERTISEMENT

89ರ ವೈದ್ಯೆಯಿಂದ ನಿತ್ಯ 4 ಶಸ್ತ್ರಕ್ರಿಯೆ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
89ರ ವೈದ್ಯೆಯಿಂದ ನಿತ್ಯ 4 ಶಸ್ತ್ರಕ್ರಿಯೆ!
89ರ ವೈದ್ಯೆಯಿಂದ ನಿತ್ಯ 4 ಶಸ್ತ್ರಕ್ರಿಯೆ!   

ವಯಸ್ಸು ಹೆಚ್ಚಾಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಕ್ಷೀಣಿಸಿ ಹಲವರು ಮನೆಗೆ ಸೀಮಿತರಾಗುತ್ತಾರೆ. ಕೆಲವರಂತೂ ಇತರರ ಸಹಾಯವಿಲ್ಲದೆ ಬದುಕುವುದು ಅಸಾಧ್ಯ ಎಂಬಂತಹ ಸ್ಥಿತಿಗೆ ತಲುಪುತ್ತಾರೆ.

ಆದರೆ ಹಿರಿಯರಿಗೆ ಆದರ್ಶವೆಂಬಂತೆ ಜೀವಿಸುತ್ತಿರುವ ರಷ್ಯಾದ ವೈದ್ಯೆ ಡಾ. ಅಲ್ಲಾ ಇಲ್ಲಿಂಚಿನಾ  ಅವರು 89 ವರ್ಷ ವಯಸ್ಸಾದರೂ ಪ್ರತಿ ದಿನ ಕನಿಷ್ಠ 4 ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ.

ವೃತ್ತಿಯಿಂದ ಅವರು ರಷ್ಯಾದ ಮಾಸ್ಕೊದ ಆಸ್ಪತ್ರೆಯೊಂದರಲ್ಲಿ   ಶಸ್ತ್ರ ಚಿಕಿತ್ಸಕಿ. ಈಗಲೂ ನಿವೃತ್ತಿಪಡೆಯದೆ ಸೇವೆ ಮುಂದುವರಿಸಿದ್ದಾರೆ. ವೃದ್ಧಾಪ್ಯದಲ್ಲೂ ತಮ್ಮ ಅಂಧ ಸೋದರಳಿಯನ ಆರೈಕೆ ಮಾಡುವುದರ ಜತೆಗೆ 8 ಬೆಕ್ಕುಗಳನ್ನೂ ಪೋಷಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಎಫ್‌ಎಂ ಚಾನೆಲ್‌ವೊಂದು ಇವರ ಸಂದರ್ಶನ ಮಾಡಿ, ‘ನಿವೃತ್ತಿ ಪಡೆದುಕೊಳ್ಳದೇ ಸುಮ್ಮನೆ ತೊಂದರೆ ಏಕೆ ತೆಗೆದುಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದಾಗ,  ’ನಾನು ನಿವೃತ್ತಿ ಪಡೆದುಕೊಂಡರೆ ಶಸ್ತ್ರ ಚಿಕಿತ್ಸೆಗಳನ್ನು ಯಾರು ಮಾಡುತ್ತಾರೆ ಎಂದು ಅವರಿಗೇ ಮರು ಪ್ರಶ್ನೆ ಹಾಕಿದ್ದರು.

‘ವೈದ್ಯಕೀಯ ನನ್ನ ವೃತ್ತಿಯಷ್ಟೇ ಅಲ್ಲ ಪ್ರವೃತ್ತಿಯೂ ಆಗಿದೆ. ನನಗೆ ಬೇಕಿನಿಸಿದ್ದನ್ನು ತಿನ್ನುತ್ತೇನೆ, ಸಂತೋಷವಾದರೆ ಜೋರಾಗಿ ನಗುತ್ತೇನೆ, ಅಳು ಬಂದರೆ ಜೋರಾಗಿ ಅಳುತ್ತೇನೆ, ಇದೇ ನನ್ನ ದೀರ್ಘಾಯುಷ್ಯದ ಗುಟ್ಟು’ ಎನ್ನುತ್ತಾರೆ  ಇಲ್ಲಿಂಚಿನಾ. ವಿಶ್ವದ ಅತಿ ಹಿರಿಯ ಸರ್ಜನ್‌ ಎಂಬ ಖ್ಯಾತಿಗೂ ಅವರು  ಪಾತ್ರರಾಗಿದ್ದಾರೆ.

67 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ನಿರತರಾಗಿರುವ ಅವರು ಈ ವರೆಗೆ ಮಾಡಿದ ಶಸ್ತ್ರಕ್ರಿಯೆ 10 ಸಾವಿರಕ್ಕೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT