ADVERTISEMENT

ಕಂಡದ್ದೆಲ್ಲ ಕಲೆಯಾಯ್ತು!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಕಂಡದ್ದೆಲ್ಲ ಕಲೆಯಾಯ್ತು!
ಕಂಡದ್ದೆಲ್ಲ ಕಲೆಯಾಯ್ತು!   

ಬ್ರೊಕೋಲಿಯಲ್ಲಿ ಹುಡುಗಿಯ ಸುರುಳಿ ಕೂದಲು, ಪಫ್ಸ್‌ನಲ್ಲಿ ಗಣಪ, ಸ್ಕ್ರೂ ಡ್ರೈವರ್‌ನಲ್ಲಿ ಜಿಂಕೆ, ಪಾರ್ಲೆ ಜಿ ಬಿಸ್ಕೆಟ್‌ನಲ್ಲಿ ಲ್ಯಾಪ್‌ಟಾಪ್‌, ಜಿಲೇಬಿಯಲ್ಲಿ ಮಹಿಳೆಯ ತುರುಬು... ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಿರುತ್ತದೆ.

ಹೀಗೆ ಕಂಡದ್ದರಲ್ಲಿ ಕಲೆ ಬಿಡಿಸುವ ಕಲೆ ಒಲಿದಿರುವುದು ಕೋಲ್ಕತ್ತಾದ ರಾಜ್‌ ಕಮಲ್ ಅವರಿಗೆ. ಕಣ್ಣಿಗೆ ಕಂಡ ಎಲ್ಲವೂ ಇವರ ಕಲೆಗೆ ಸ್ಫೂರ್ತಿ.

ಒಮ್ಮೆ ಚಪಾತಿ ತಿನ್ನುವಾಗ ಅದರ ಚೂರು, ತುಂಟ ಹುಡುಗಿಯ ತುಂಡು ಲಂಗದಂತೆಯೇ ಕಂಡಿತು. ಹುಡುಗಿಯ ಚಿತ್ರ ಬಿಡಿಸಿ ಚಪಾತಿಯನ್ನೇ ಲಂಗವನ್ನಾಗಿ ಇಟ್ಟು ಅದರಲ್ಲೇ ಕಲೆ ಸೃಷ್ಟಿಸಿದರು. ಹೀಗೆ ಏನೇ ಕಂಡರೂ ಅದರಲ್ಲಿ ಇನ್ನೇನನ್ನೋ ಸೃಷ್ಟಿಸುವುದು ಇವರಿಗೆ ಕರಗತವಾಗಿದೆ.

ADVERTISEMENT

‘ಆಬ್ಜೆಕ್ಟ್ ಇನ್‌ಸ್ಪೈರ್ಡ್ ಆರ್ಟ್‌’ನಲ್ಲಿ ಪಳಗಿದ ರಾಜ್ ಅವರು ಎಲ್ಲಾ ವಸ್ತುಗಳನ್ನು ನೋಡುವುದು ಜಿಯೋಮೆಟ್ರಿಯ ನಿಯಮದ ಮೇಲೇ.

‘ನನಗೆ ಕಾಜು ಬರ್ಫಿ ನೋಡಿದರೆ ಒಂದು ತಿಂಡಿ ಎಂದು ಅನ್ನಿಸುವುದೇ ಇಲ್ಲ. ಅದರಲ್ಲಿ ಡೈಮಂಡ್ ಆಕಾರ ಕಾಣುತ್ತದೆ. ಅದರಿಂದ ಏನು ಮಾಡಬಹುದು ಎಂಬುದನ್ನು ಯೋಚಿಸುತ್ತೇನೆ. ಮೊಟ್ಟೆ ಅಥವಾ ದ್ರಾಕ್ಷಿ ಮನುಷ್ಯನ ತಲೆಯಂತೆ ಕಾಣಿಸುತ್ತದೆ. ಯಾವುದೇ ವಸ್ತುವನ್ನು ಒಂದು ಆಕಾರದ ರೂಪದಲ್ಲಿ ನೋಡಿದರೆ ಸಾಧ್ಯತೆಗಳಿಗೆ ಕೊನೆಯೇ ಇಲ್ಲ’ ಎಂದು ವಿವರಿಸುತ್ತಾರೆ ರಾಜ್.

ತಿಂಡಿಗಳು ಇ­ವರ ಕಲೆಯ ಬಹುಮುಖ್ಯ ವಸ್ತುಗಳು. ಇವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ತಿಂಡಿಗಳಿಂದ, ಕೆಲವು ಸಾಮಗ್ರಿಗಳಿಂದ ರೂಪುಗೊಂಡ ಕಲೆಯ ಮಹಾಪೂರವೇ ಇದೆ. ಸಮಾಜದ ಪ್ರಸ್ತುತ ಚರ್ಚಿತ ಸಂಗತಿಗಳು, ರಾಜಕೀಯ ವಿಡಂಬನೆಗಳು, ವಿಚಾರ ವಿನಿಮಯಗಳೂ ಇವರ ಕಲೆಯಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಕಲೆಯನ್ನು ಜಾಗೃತಿಯ ಮಾಧ್ಯಮವನ್ನಾಗಿಯೂ ಬಳಸಿಕೊಂಡಿದ್ದಾರೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.