ADVERTISEMENT

ಮಾರುತಿ ಸಿಯಾಜ್ ಎಸ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ಮಾರುತಿ ಸಿಯಾಜ್ ಎಸ್ ಬಿಡುಗಡೆ
ಮಾರುತಿ ಸಿಯಾಜ್ ಎಸ್ ಬಿಡುಗಡೆ   

ಮಾರುತಿ ಇದೀಗ ಸಿಯಾಜ್ ಎಸ್‌ ಸೆಡಾನ್ ಬಿಡುಗಡೆಗೊಳಿಸಿದ್ದು, ₹9.39 ಲಕ್ಷ (ಎಕ್ಸ್‌ ಶೋರೂಂ ದೆಹಲಿ) ಬೆಲೆ ನಿಗದಿಪಡಿಸಿದೆ.

ಆಲ್ಫಾ ಟ್ರಿಮ್ ಆಧಾರದ ಮೇಲೆ ರೂಪುಗೊಂಡಿರುವ ಸಿಯಾಜ್ ಎಸ್‌ನ ಒಳ ಹಾಗೂ ಹೊರಾಂಗಣಗಳಲ್ಲಿ ಸಾಕಷ್ಟು ಸ್ಪೋರ್ಟಿ ಅಂಶಗಳನ್ನು ಅಳವಡಿಸಲಾಗಿದೆ.

ಸ್ಪಾಯ್ಲರ್ ಪ್ಯಾಕ್ ಫ್ರಂಟ್, ಟ್ರಂಕ್ ಲಿಡ್ ಸ್ಪಾಯ್ಲರ್, ಲೆದರ್ ಸೀಟ್‌ಗಳು ಹಾಗೂ ಕ್ರೋಮ್ ಫಿನಿಶಿಂಗ್‌ನೊಂದಿಗಿನ ಕಪ್ಪು ಒಳಾಂಗಣದಿಂದ ಕ್ಯಾಬಿನ್‌ ಮತ್ತಷ್ಟು ಲುಕ್ ಪಡೆದುಕೊಂಡಿದೆ.

ADVERTISEMENT

ಮನರಂಜನೆಗೆ ಸ್ಮಾರ್ಟ್‌ಪ್ಲೇ ಇನ್ಫೊಟೇನ್‌ಮೆಂಟ್ ಸಿಸ್ಟಮ್ ಇದೆ. ಡ್ಯುಯಲ್ ಏರ್‌ ಬ್ಯಾಗ್, ಪ್ರಿ ಟೆನ್ಷನರ್ ಸೀಟ್‌ ಬೆಲ್ಟ್, ಎಬಿಎಸ್‌, ಇಬಿಡಿ ಮತ್ತು
ಚೈಲ್ಡ್ ಸೀಟ್ ರೆಸ್ಟ್ರೇನ್ ಸಿಸ್ಟಂಗಳನ್ನು ಸುರಕ್ಷತೆ ದೃಷ್ಟಿಯಿಂದ ನೀಡಲಾಗಿದೆ.

ಏಳು ಬಣ್ಣಗಳಲ್ಲಿ ಲಭ್ಯ. ಇದರ ಡೀಸೆಲ್ ಸ್ಮಾರ್ಟ್ ಹೈಬ್ರಿಡ್ ಲೀಟರಿಗೆ 28.9 ಕಿ.ಮೀ ಮೈಲೇಜ್ ನೀಡಲಿದೆ. ಎರಡೂ ಅವತರಣಿಕೆಗಳಲ್ಲಿ ಸಿಯಾಜ್ ಲಭ್ಯವಿದ್ದು, ಪೆಟ್ರೋಲ್‌ಗೆ 9.39 ಲಕ್ಷ ಹಾಗೂ ಡೀಸೆಲ್ ಸ್ಮಾರ್ಟ್‌ ಹೈಬ್ರಿಡ್‌ಗೆ 11.55 ಲಕ್ಷ ರೂಪಾಯಿ ನಿಗದಿಗೊಳಿಸಲಾಗಿದೆ.

ಯುವಜನರ ಅವಶ್ಯಕತೆಗಳನ್ನೇ ಆದ್ಯತೆಯನ್ನಾಗಿಸಿಕೊಂಡು ಸಿಯಾಜ್ ಎಸ್‌ ಅನ್ನು ಪರಿಚಯಿಸಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

*

2018ಕ್ಕೆ ಹೀರೊ ಆವಾ
ಹೀರೊ ಮೊಟೊಕಾರ್ಪ್‌ನ ಮುಂಬರುವ 125 ಸಿಸಿ ಸ್ಕೂಟರ್– ಡೇರ್ ಹೀರೊ, ಆವಾ ರೂಪದಲ್ಲಿ 2018ಕ್ಕೆ ವಾಹನ ಮಾರುಕಟ್ಟೆ ಪ್ರವೇಶಿಸಲಿದೆ.

2014ರ ವಾಹನ ಪ್ರದರ್ಶನದಲ್ಲಿ ಹೀರೊ ಡೇರ್‌ ಪರಿಚಿತಗೊಂಡಿತ್ತು. ಈ ಸ್ಕೂಟರ್‌ನಲ್ಲಿ 124.6ಸಿಸಿ ಸಿಂಗಲ್ ಸಿಲಿಂಡರ್‌ ಮಿಲ್ ಇದ್ದು, 9.38ಎಚ್‌ಪಿ–7,500 ಆರ್‌ಪಿಎಂ ಹಾಗೂ 9.8 ಎನ್‌ಎಂ ಟಾರ್ಕ್ – 6,500 ಆರ್‌ಪಿಎಂ ಶಕ್ತಿ ಉತ್ಪಾದಿಸುತ್ತದೆ. ಎಂಜಿನ್‌ಗೆ ಸಿವಿಟಿ ಯುನಿಟ್ ಜೊತೆಯಾಗಲಿದೆ.

ಆರು ಲೀಟರ್ ಇಂಧನ ಸಾಮರ್ಥ್ಯವಿದ್ದು, 114 ಕೆ.ಜಿ ತೂಕ ಹೊಂದಿದೆ. ಅಲಾಯ್ ಚಕ್ರಗಳು, ಎಲ್‌ಇಡಿ ಡೇ ಟೈಂ ರನ್ನಿಂಗ್ ಲೈಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಸಸ್ಪೆನ್ಷನ್‌ಗಾಗಿ, ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಮುಂಭಾಗದಲ್ಲಿ ಹಾಗೂ ಮೋನೋಶಾಕ್ ಅನ್ನು ಹಿಂಬದಿಯಲ್ಲಿ ನೀಡಲಾಗಿದೆ. 155 ಎಂ.ಎಂ ಗ್ರೌಂಡ್‌ ಕ್ಲಿಯರೆನ್ಸ್ ಸ್ಕೂಟರ್‌ಗಿದೆ. ಮುಂದಿನ ವರ್ಷದಲ್ಲಿ, ಆವಾ ಹೊರತಾಗಿ ಮತ್ತೆರಡು ಸ್ಕೂಟರ್‌ಗಳೂ ಬಿಡುಗಡೆಯ ಹಾದಿಯಲ್ಲಿವೆ.

*


ಹ್ಯುಂಡೈನಿಂದ ಲಾಂಗ್‌ ರೇಂಜ್‌ನ ಪ್ರೀಮಿಯಂ ಎಲೆಕ್ಟ್ರಿಕ್ ಕಾರು
ಹ್ಯುಂಡೈ ಹಾಗೂ ಅದರ ಅಂಗ ಸಂಸ್ಥೆ ಕಿಯಾ ಮೋಟಾರ್ಸ್‌, ತನ್ನ ಉತ್ಪನ್ನಗಳ ಸಾಲಿನಲ್ಲಿ ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಕ್ಕೆ ಆದ್ಯತೆ ನೀಡಿವೆಯಂತೆ.

ವಿದ್ಯುತ್ ಚಾಲಿತ ವಾಹನವಷ್ಟೇ ಅಲ್ಲ, ದೂರದ ಅಂತರದ ಪ್ರಯಾಣವನ್ನು ಆದ್ಯತೆಯಾಗಿಸಿಕೊಂಡ ಎಲೆಕ್ಟ್ರಿಕ್ ಕಾರಿನ ತಯಾರಿಗೆ ಮುನ್ನುಡಿ ಬರೆದಿರುವುದಾಗಿ ಹೇಳಿಕೊಂಡಿದೆ.

ಈ ಎಲೆಕ್ಟ್ರಿಕ್ ಸೆಡಾನ್ ಅನ್ನು ಹೈಎಂಡ್‌ನ ಜೆನೆಸಿಸ್‌ ಬ್ರ್ಯಾಂಡ್‌ ಅಡಿಯಲ್ಲಿ 2021ರಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಒಮ್ಮೆ ಚಾರ್ಜ್‌ ಮಾಡಿದರೆ 310 ಮೈಲಿ–500 ಕಿ.ಮೀ ಓಡಬಲ್ಲ ಕಾರಿನ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಕೋನಾ ಸ್ಪೋರ್ಟ್‌ ಯುಟಿಲಿಟಿ ವಾಹನದ ವಿದ್ಯುತ್ ಆವೃತ್ತಿಯನ್ನೂ ತರುವ ಯೋಚನೆಯಲ್ಲಿದೆ.

ಪರಿಸರಸ್ನೇಹಿ ಕಾರುಗಳ ತಯಾರಿಕೆಯ ಆಲೋಚನೆಯನ್ನು ಗಟ್ಟಿಗೊಳಿಸುತ್ತಿದ್ದು, ಈ ದೃಷ್ಟಿಯಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.