ADVERTISEMENT

ಸ್ಪರ್ಧೆಗೆ ಇಳಿಯಿತು ಮೋಜೊ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:40 IST
Last Updated 14 ಮಾರ್ಚ್ 2018, 19:40 IST
ಸ್ಪರ್ಧೆಗೆ ಇಳಿಯಿತು ಮೋಜೊ
ಸ್ಪರ್ಧೆಗೆ ಇಳಿಯಿತು ಮೋಜೊ   

‘ಯೂನಿವರ್ಸಲ್ ಟೂರರ್’ ಎಂಬ ಪರಿಕಲ್ಪನೆಯೊಂದಿಗೆ ಮಹೀಂದ್ರಾ ‘ಮೋಜೊ ಯುಟಿ 300’ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಮೋಜೊ ಅಡ್ವೆಂಚರ್ ಟೂರರ್‌ನ ಕಡಿಮೆ ಬೆಲೆಯ ರೂಪಾಂತರವಾಗಿ ಈ ಬೈಕ್ ಹೊರತಂದಿದ್ದು, 2018ರ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರೀ ಮಾರಾಟ ಕಾಣುವ ನಿರೀಕ್ಷೆಯನ್ನೂ ಹೊತ್ತಿದೆ.

ಈ ಮೋಜೊ ಎಕ್ಸ್‌ಟಿ 300 ಆವೃತ್ತಿಗಿಂತ ಕಡಿಮೆ ಬೆಲೆ. ಆದರೆ ಅದರಲ್ಲಿದ್ದ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಹಾಗೂ ಪಿರೆಲ್ಲಿ ಡಯಾಬ್ಲೊ ರೋಸೊ || ಟೈರ್‌ಗಳ ಕೊರತೆ ಈ ಯುಟಿ 300ನಲ್ಲಿದೆ. ಬ್ಲಾಕ್‌ ಅಲಾಯ್‌ ವೀಲ್‌ನೊಂದಿಗೆ ಎಂಆರ್‌ಎಫ್ ಟೈರ್‌ಗಳು ಗಡಸು ನೋಟವನ್ನು ಬೈಕ್‌ಗೆ ನೀಡಿವೆ.
ಆದರೆ ಇದಕ್ಕೆ ಎಕ್ಸ್‌ಟಿನಂತೆ ಫ್ರಂಟ್ ಫೋರ್ಕ್‌ಗಳು ಇಲ್ಲ. ಬ್ರೇಕಿಂಗ್‌ಗೆಂದು, ಬೈಕ್‌ಗೆ 320 ಎಂಎಂ ಡಿಸ್ಕ್‌ ಬ್ರೇಕ್ ಹಾಗೂ 245 ರಿಯರ್ ಡಿಸ್ಕ್‌ ಬ್ರೇಕ್ ನೀಡಲಾಗಿದೆ. ಡ್ಯುಯಲ್ ಅಲ್ಯುಮಿನಿಯಂ ಎಕ್ಸ್‌ಹಾಸ್ಟ್‌ಗೆ ಬದಲಾಗಿ, ಇದರಲ್ಲಿ ಸಿಂಗಲ್ ಯುನಿಟ್ ಇದ್ದು, ಬೈಕ್‌ನ ಎಡ ಬದಿಯಲ್ಲಿದೆ. ಪವರ್‌ಟ್ರೇನ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಎಕ್ಸ್‌ಟಿ 300ನ ಇಎಫ್‌ಐ ತಂತ್ರಜ್ಞಾನಕ್ಕೆ ಬದಲಾಗಿ, ಕಡಿಮೆ ಬೆಲೆಗೆ ನೀಡುವ ಉದ್ದೇಶದಿಂದ ಕಾರ್ಬುರೇಟರ್ ಅಳವಡಿಸಲಾಗಿದೆ.

ADVERTISEMENT

295ಸಿಸಿ ಸಿಂಗಲ್ ಸಿಲಿಂಡರ್ ಜೊತೆ ಲಿಕ್ವಿಡ್ ಕೂಲ್ಡ್ ಎಂಜಿನ್ ಇದ್ದು, 6 ಸ್ಪೀಡ್ ಟ್ರಾನ್ಸ್‌ಮಿಷನ್ ಇದೆ. ಈ ಎಂಜಿನ್ 25 ಬಿಎಚ್‌ಪಿ ಪೀಕ್ ಪವರ್ ಹಾಗೂ 28ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. ಇಂಧನ ಕ್ಷಮತೆಯೂ ತಕ್ಕುದಾಗಿದೆ.

ಗ್ರಾಹಕರ ಗಮನವನ್ನು ಸೆಳೆಯಲು, ಈ ಬೈಕ್‌ ಮೇಲೆ, ಮಹೀಂದ್ರಾ ₹10,000 ರೂಪಾಯಿ ಆನ್‌ರೋಡ್‌ ರಿಯಾಯಿತಿಯನ್ನೂ ಘೋಷಿಸಿದೆ. ಜೊತಗೆ ₹ 4,000 ಮೌಲ್ಯದ ಅಕ್ಸೆಸರಿಗಳನ್ನೂ ನೀಡುತ್ತಿದೆ. ಇದರ ಬೆಲೆಯನ್ನು ₹ 1.49 ಲಕ್ಷ (ಎಕ್ಸ್‌ ಶೋ ರೂಂ, ದೆಹಲಿ) ನಿಗದಿಗೊಳಿಸಿದೆ. ಈ ಬೆಲೆಯೊಂದಿಗೆ ಬಜಾಜ್ ಡಾಮಿನರ್ 400ಗೆ ಸ್ಪರ್ಧೆ ನೀಡಿದೆ.

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.