ADVERTISEMENT

ಹುಲ್ಲಿನ ಹಾಸಿಗೆಯಲ್ಲಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಹುಲ್ಲಿನ ಹಾಸಿಗೆಯಲ್ಲಿ
ಹುಲ್ಲಿನ ಹಾಸಿಗೆಯಲ್ಲಿ   

ಸ್ಪಾಗಳಿಗೆ ಹೋಗಿ ಮಸಾಜ್ ಮಾಡಿಸಿಕೊಂಡು, ಸ್ನಾನ ಮಾಡಿದರೆ ಮೈ ಮನಸ್ಸು ಆರಾಮ ಎಂದುಕೊಳ್ಳುವವರು ಸಾಕಷ್ಟು ಮಂದಿ. ಈ ಆರಾಮದ ಉದ್ದೇಶವನ್ನೇ ಕಸುಬಾಗಿಸಿಕೊಂಡು ಮೈ ಹಗುರಗೊಳಿಸುವ ಸಾಕಷ್ಟು ಮಸಾಜ್, ಸ್ನಾನಪದ್ಧತಿಗಳೇ ಹುಟ್ಟಿಕೊಂಡಿವೆ.

ಅದರ ಪೈಕಿ ಈಗ ಇಟಲಿಯಲ್ಲಿ ಹೆಚ್ಚು ಸುದ್ದಿಯಲ್ಲಿರುವುದು ‘ಹೇ ಬಾತ್’. ಅಂದರೆ ಹುಲ್ಲಿನ ಸ್ನಾನ. ಇದೇನಿದು ಹೇ ಬಾತ್ ಎಂದು ಹುಬ್ಬೇರಿಸುವ ಮುನ್ನ ಇದನ್ನು ಓದಿ ನೋಡಿ. ಇಟಲಿಯಲ್ಲಿ ಈಗೀಗ ಪ್ರಚಲಿತದಲ್ಲಿರುವ ಸ್ನಾನದ ಪದ್ಧತಿ ಇದು.

ಒಣಗಿದ ಹುಲ್ಲನ್ನು ಮೈ ತುಂಬ ಹೊದಿಸಿ ಸುಮಾರು 40 ನಿಮಿಷ ಅದರಲ್ಲೇ ಮಲಗಿಸಲಾಗುವುದು. ಬೆಟ್ಟಗುಡ್ಡಗಳಲ್ಲಿ ಆರಿಸಿ ತಂದ ಈ ಹುಲ್ಲುಗಳಲ್ಲಿ ಹಲವು ಔಷಧೀಯ ಗುಣಗಳಿದ್ದು, ನಿಶ್ಶಕ್ತ ಸ್ನಾಯುಗಳನ್ನು ವಿಶ್ರಾಂತಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಈ ಸ್ನಾನ ಸುದ್ದಿ ಮಾಡಿದೆ. ಹಾಗೆಯೇ ಈ ಪದ್ಧತಿ ಹಲವು ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಿದೆಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.