ADVERTISEMENT

ಅಭಿಷೇಕ್ ರೆಡ್ಡಿ ಭರ್ಜರಿ ಶತಕ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಮೈಸೂರು: ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ರೆಡ್ಡಿ ಗಳಿಸಿದ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡವು ಸೋಮವಾರ ಇಲ್ಲಿ ರಾಜಸ್ತಾನದ ವಿರುದ್ಧ ಆರಂಭವಾದ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಕ್ಕಿತು. ಅಭಿಷೇಕ್ ರೆಡ್ಡಿ (103; 194ಎಸೆತ, 15ಬೌಂಡರಿ) ಮತ್ತು ಲಿಯಾನ್ ಖಾನ್ (16; 58ಎ, 3ಬೌಂ) ಮೊದಲ ವಿಕೆಟ್‌ಗೆ 60 ರನ್ನುಗಳನ್ನು ಸೇರಿಸಿದರು.

ಖಾನ್ ವಿಕೆಟ್ ಪತನದ ನಂತರ ಅಭಿಷೇಕ್ ಜೊತೆ ಸೇರಿದ ಶಿಶಿರ್ ಭವಾನೆ (48; 66ಎ, 9ಬೌಂಡರಿ) ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್ನುಗಳ ಅಮೂಲ್ಯ ಕಾಣಿಕೆ ನೀಡಿದರು. ಉತ್ತಮ ಡ್ರೈವ್, ಕಟ್‌ಗಳ ಮೂಲಕ ಗಮನ ಸೆಳೆದ ಅಭಿಷೇಕ್ ಶತಕ ಪೂರೈಸಿಕೊಂಡು, ಇನಿಂಗ್ಸ್‌ಗೆ ಉತ್ತಮ ತಳಹದಿ ಹಾಕಿದರು.

ಶಿಶಿರ್ ಔಟಾದ ನಂತರ ಕೆ.ಎನ್. ಭರತ್ (70; 108ಎ, 9ಬೌಂ) ಅರ್ಧಶತಕದ ಮೂಲಕ ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 88 ಓವರುಗಳಲ್ಲಿ 6 ವಿಕೆಟ್‌ಗಳಿಗೆ 276 (ಅಭಿಷೇಕ್ ರೆಡ್ಡಿ 103, ಲಿಯಾನ್ ಖಾನ್ 16, ಶಿಶಿರ್ ಭವಾನೆ 48, ಕೆ.ಎನ್. ಭರತ್ 70, ಎಂ.ಜಿ. ನವೀನ್ ಬ್ಯಾಟಿಂಗ್ 10, ಜೀಷನ್ ಅಲಿ ಬ್ಯಾಟಿಂಗ್ 2, ಟಿ.ಎಂ. ಉಲ್‌ ಹಕ್ 49ಕ್ಕೆ3, ಎಂ.ಆರ್. ಚೌಧರಿ 87ಕ್ಕೆ2, ಎ.ಬಿ. ಸಿಂಗ್ 29ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.