ADVERTISEMENT

ಐಪಿಎಲ್: ನಾಳೆ ಬೆಂಗಳೂರಿನಲ್ಲಿ ಆಟಗಾರರ ಹರಾಜು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಐಪಿಎಲ್:  ನಾಳೆ ಬೆಂಗಳೂರಿನಲ್ಲಿ ಆಟಗಾರರ ಹರಾಜು
ಐಪಿಎಲ್: ನಾಳೆ ಬೆಂಗಳೂರಿನಲ್ಲಿ ಆಟಗಾರರ ಹರಾಜು   
ಬೆಂಗಳೂರು: ಏಪ್ರಿಲ್‌ನಲ್ಲಿ ನಡೆಯ ಲಿರುವ ಐಪಿಎಲ್‌ ಹತ್ತನೇ ಆವೃತ್ತಿಯು ಟೂರ್ನಿಗೆ ಸೋಮವಾರ ನಗರದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ಬಾರಿಯ ಹರಾಜಿಗೆ ಒಟ್ಟು 352 ಆಟಗಾರರು ಲಭ್ಯರಿದ್ದಾರೆ. 
 
ದೇಶಿ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ನೀಡಿರುವ ಕರ್ನಾಟಕದ ಪ್ರವೀಣ್‌ ದುಬೆ, ಕೆ. ಗೌತಮ್‌, ಶಿಶಿರ್ ಭವಾನೆ, ಆರ್‌. ಸಮರ್ಥ್‌, ಸಿ.ಎಂ. ಗೌತಮ್‌, ಪವನ್ ದೇಶಪಾಂಡೆ, ಎಂ. ಪ್ರಸಿದ್ಧ ಕೃಷ್ಣ, ಅನಿರುದ್ಧ ಜೋಶಿ, ಅಮಿತ್ ವರ್ಮಾ, ವೈಶಾಕ್‌ ವಿಜಯ ಕುಮಾರ್‌ ಹರಾಜಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
 
ಐಪಿಎಲ್‌ನಲ್ಲಿ ಆಡಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಹೈದರಾಬಾದ್‌ ಸನ್‌ರೈಸರ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತ್ತ ನೈಟ್ ರೈಡರ್ಸ್‌, ಗುಜರಾತ್‌ ಲಯನ್ಸ್‌, ಪುಣೆ ಸೂಪರ್‌ಜೈಂಟ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡಗಳ ಫ್ರಾಂಚೈಸ್‌ಗಳು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಹರಾಜು ಪ್ರಕ್ರಿಯೆಯನ್ನು ಇಂಗ್ಲೆಂಡ್‌ನ ರಿಚರ್ಡ್‌ ಮೆಡ್ಲೆ ನಡೆಸಿಕೊಡಲಿದ್ದಾರೆ.
 
ಹರಾಜಿಗೆ ಜಗ್ಗಿ: ಸೈಯದ್‌ ಮುಷ್ತಾಕ್‌ ಅಲಿ  ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ನೀಡಿರುವ ಜಾರ್ಖಂಡ್‌ನ ಇಶಾಂಕ್‌ ಜಗ್ಗಿ ಐಪಿಎಲ್‌ ಹರಾಜು ಪಟ್ಟಿಯಲ್ಲಿ ಶನಿವಾರ ಸ್ಥಾನ ಪಡೆದಿದ್ದಾರೆ.
 
ಪೂರ್ವ ವಲಯ ಪ್ರತಿನಿಧಿಸಿದ್ದ ಇಶಾಂಕ್‌ ಕೇಂದ್ರ ವಲಯ ವಿರುದ್ಧ 37 ಎಸೆತಗಳಲ್ಲಿ 51 ರನ್, ದಕ್ಷಿಣ ವಲಯ ವಿರುದ್ಧ 51 ಎಸೆತಗಳಲ್ಲಿ 90 ಮತ್ತು ಪಶ್ಚಿಮ ವಲಯ ವಿರುದ್ಧ 34 ಎಸೆತ ಗಳಲ್ಲಿ 58 ರನ್ ಗಳಿಸಿದ್ದಾರೆ. ₹ 10 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.