ADVERTISEMENT

ಐಪಿಎಲ್‌ 2017 ರ ವೇಳಾಪಟ್ಟಿ ಬಿಡುಗಡೆ

ಏಜೆನ್ಸೀಸ್
Published 17 ಫೆಬ್ರುವರಿ 2017, 8:51 IST
Last Updated 17 ಫೆಬ್ರುವರಿ 2017, 8:51 IST
ಐಪಿಎಲ್‌ 2017 ರ ವೇಳಾಪಟ್ಟಿ ಬಿಡುಗಡೆ
ಐಪಿಎಲ್‌ 2017 ರ ವೇಳಾಪಟ್ಟಿ ಬಿಡುಗಡೆ   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಬುಧವಾರ ಬಿಡುಗಡೆಗೊಳಿಸಿದೆ.

ಮೊದಲ ಪಂದ್ಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಡುವೆ ಹೈದರಾಬಾದಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್‌ 5 ರಂದು ನಡೆಯಲಿದೆ.

47 ದಿನಗಳ ಕಾಲ ನಡೆಯಲಿರುವ ಚುಟುಕು ಕ್ರಿಕೆಟ್‌ ಸೆಣಸಾಟದಲ್ಲಿ ಪ್ರತಿ ತಂಡವು 14 ಪಂದ್ಯಗಳನ್ನು ಆಡಲಿವೆ. ದೇಶದ ಹತ್ತು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. 2008ರಲ್ಲಿ ಆರಂಭವಾದ ಐಪಿಎಲ್‌, ಪ್ರತಿವರ್ಷ ಹೊಸ ಅವತಾರದೊಂದಿಗೆ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸುತ್ತ ಸಾಗಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಏಪ್ರಿಲ್‌ 8ರಂದು ತವರು ನೆಲವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೆಹಲಿ ಡೇರ್‌ಡೆವಿಲ್ಸ್‌ ತಂಡದ ವಿರುದ್ಧ ಪಂದ್ಯ ಆಡಲಿದೆ. ಐ‍ಪಿಎಲ್‌ 10ನೇ ಆವೃತ್ತಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ.

ಪ್ರತಿ ತಂಡದ ಆಟಗಾರರ ಆಯ್ಕೆಗಾಗಿ ಹರಾಜು ಪ್ರಕ್ರಿಯೆ ಇದೇ 20 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.