ADVERTISEMENT

ಕರ್ನಾಟಕ ವಾಲಿ ಲೀಗ್‌:ಸೆಮಿಗೆ ಪೋಸ್ಟಲ್‌

​ಪ್ರಜಾವಾಣಿ ವಾರ್ತೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST

ಹೊಸನಗರ: ಬೆಂಗಳೂರಿನ ಪೋಸ್ಟಲ್ ಮತ್ತು ಹುಬ್ಬಳ್ಳಿಯ ಸೌತ್‌ ವೆಸ್ಟರ್ನ್‌ ರೈಲ್ವೆ ತಂಡಗಳು, ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಕರ್ನಾಟಕ ವಾಲಿ ಲೀಗ್‌ 2017’ ಮೂರನೇ ಹಂತದ ಪಂದ್ಯಾವಳಿಯಲ್ಲಿ ‘ಎ’ ಗುಂಪಿನಿಂದ ಸೆಮಿಫೈನಲ್‌ ತಲುಪಿವೆ.

ಜಿಮ್ಮಿ ಜಾರ್ಜ್‌ ವಾಲಿಬಾಲ್‌ ಕ್ಲಬ್‌ ಆಶ್ರಯದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಶುಕ್ರವಾರ ಸೌತ್‌ ವೆಸ್ಟರ್ನ್‌ ರೈಲ್ವೆ ತಂಡ 25–21, 25–19, 25–18ರಲ್ಲಿ ಬಳ್ಳಾರಿಯ ಜಿಂದಾಲ್‌ ಸೌತ್‌ ವೆಸ್ಟ್‌ ತಂಡವನ್ನು ನೇರ ಸೆಟ್‌ಗಳಿಂದ ಮಣಿಸಿತು.

ಎರಡನೇ ಹಂತದ ಲೀಗ್‌ನ ವಿಜೇತರಾಗಿದ್ದ ಪೋಸ್ಟಲ್‌ ತಂಡ ಇದಕ್ಕೆ ಮೊದಲು 25 –10, 28– 26, 25– 14ರಲ್ಲಿ ನೇರ ಸೆಟ್‌ಗಳಿಂದ ಜಿಂದಾಲ್‌ ಸೌತ್‌ ವೆಸ್ಟ್‌ ತಂಡವನ್ನು ಸೋಲಿಸಿತ್ತು.

ADVERTISEMENT

‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಸಿಕ್ಯುಎಎಲ್‌ ತಂಡವು 26–24 , 21–25, 16–25, 25–21, 15–13 ರಲ್ಲಿ 3–2 ಸೆಟ್‌ಗಳಿಂದ ಹೊಯ್ಸಳ ತಂಡವನ್ನು ಸೋಲಿಸಿತು. ಮೊದಲ ಹಂತದ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ ಬಿಎಸ್ಎನ್ಎಲ್ ತಂಡ ಇನ್ನೊಂದು ಲೀಗ್‌ ಪಂದ್ಯದಲ್ಲಿ 25– 20, 19– 25, 17– 25, 25– 22, 15 –13 ರಲ್ಲಿ ಕರ್ನಾಟಕ ಪೊಲೀಸ್ ತಂಡವನ್ನು ಪ್ರಯಾಸದಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.