ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ಮೂರನೇ ಚಿನ್ನ ಗೆದ್ದ ಸತೀಶ್‌ ಕುಮಾರ್‌

ಏಜೆನ್ಸೀಸ್
Published 7 ಏಪ್ರಿಲ್ 2018, 3:05 IST
Last Updated 7 ಏಪ್ರಿಲ್ 2018, 3:05 IST
ಸತೀಶ್‌ ಕುಮಾರ್‌ ಶಿವಲಿಂಗಂ – ರಾಯಿಟರ್ಸ್ ಚಿತ್ರ
ಸತೀಶ್‌ ಕುಮಾರ್‌ ಶಿವಲಿಂಗಂ – ರಾಯಿಟರ್ಸ್ ಚಿತ್ರ   

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಸತೀಶ್‌ ಕುಮಾರ್‌ ಶಿವಲಿಂಗಂ 77 ಕೆ.ಜಿ. ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಸಿದ್ದಾರೆ.

ಇದರೊಂದಿಗೆ ಬಾರತ ಈವರೆಗೆ ಮೂರು ಚಿನ್ನದ ಪದಕ ಗಳಿಸಿದಂತಾಗಿದೆ. 48 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಸಾಯಿಕೋಮ್ ಮೀರಾ ಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರೆ, ಸಂಜಿತಾ ಚಾನು ಅವರು 53 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಪದಕ ಜಯಿಸಿದ ಹೆಗ್ಗಳಿಕೆ ಕನ್ನಡಿಗ, ಕುಂದಾಪುರದ ಗುರುರಾಜ್‌ ಪೂಜಾರಿ ಅವರದ್ದಾಗಿದೆ. 56 ಕೆ.ಜಿ. ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.