ADVERTISEMENT

ಕೆನಡ ಲೀಗ್‌ನಲ್ಲಿ ಸ್ಮಿತ್‌ ಆಟ

ಪಿಟಿಐ
Published 25 ಮೇ 2018, 19:21 IST
Last Updated 25 ಮೇ 2018, 19:21 IST
ಸ್ಟೀವ್‌ ಸ್ಮಿತ್‌
ಸ್ಟೀವ್‌ ಸ್ಮಿತ್‌   

ಮೆಲ್ಬರ್ನ್‌: ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ನಿಷೇಧ ಶಿಕ್ಷೆ ಎದುರಿಸುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವನ್‌ ಸ್ಮಿತ್‌ ಅವರು ಮುಂಬರುವ ಗ್ಲೋಬಲ್‌ ಟ್ವೆಂಟಿ–20 ಕೆನಡಾ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿದ್ದಾರೆ.

‘ಜೂನ್‌ 28ರಿಂದ ನಡೆಯುವ ಟೂರ್ನಿಯಲ್ಲಿ ಸ್ಮಿತ್‌, ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌, ಶಾಹಿದ್‌ ಅಫ್ರಿದಿ, ಡ್ವೇನ್‌ ಬ್ರಾವೊ, ಲಸಿತ್‌ ಮಾಲಿಂಗ, ಕ್ರಿಸ್‌ ಲಿನ್‌, ಡರೆನ್‌ ಸಮಿ, ಡೇವಿಡ್‌ ಮಿಲ್ಲರ್‌ ಮತ್ತು ಸುನಿಲ್‌ ನಾರಾಯಣ್‌ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ’ ಎಂದು ಕ್ರಿಕೆಟ್‌ ಕೆನಡಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಜರುಗಿದ್ದ ಚೆಂಡು ವಿರೂಪ ‍ಪ್ರಕರಣದಲ್ಲಿ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರು ಭಾಗಿಯಾಗಿದ್ದರು. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದಂತೆ ಸ್ಮಿತ್‌ ಮೇಲೆ ಒಂದು ವರ್ಷ ನಿಷೇಧ ಹೇರಿತ್ತು. ಆದರೆ ಆಸ್ಟ್ರೇಲಿಯಾದ ಹೊರಗೆ ನಡೆಯುವ ದೇಶಿ ಟೂರ್ನಿಗಳಲ್ಲಿ ಭಾಗವಹಿಸಬಹುದೆಂದು ಸಿಎ ತಿಳಿಸಿತ್ತು.

ADVERTISEMENT

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಸ್ಮಿತ್‌ ಮೇಲೆ ಒಂದು ವರ್ಷ ನಿಷೇಧ ಹೇರಿತ್ತು. ಹೀಗಾಗಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡಿರಲಿಲ್ಲ.

ಕೆರಿಬಿಯನ್‌ ಆಲ್‌ ಸ್ಟಾರ್ಸ್‌, ಟೊರೊಂಟೊ ನ್ಯಾಷನಲ್ಸ್‌, ಮಾಂಟ್ರಿ ಯಲ್‌ ಟೈಗರ್ಸ್‌, ಒಟ್ಟಾವ ರಾಯಲ್ಸ್‌, ವ್ಯಾಂಕೋವರ್‌ ನೈಟ್ಸ್‌ ಮತ್ತು ವಿನ್ನಿಪೆಗ್‌ ಹಾವಕಸ್‌ ತಂಡಗಳು ಲೀಗ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಟೂರ್ನಿಯಲ್ಲಿ ಒಟ್ಟು 22 ಪಂದ್ಯ ಗಳು ನಡೆಯಲಿವೆ. ಫೈನಲ್‌ ಹೋರಾಟ ಜುಲೈ 16ರಂದು ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.