ADVERTISEMENT

ಜೆನ್ನರ್‌ ಅವನಲ್ಲ, ಅವಳು!

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:05 IST
Last Updated 3 ಜೂನ್ 2015, 20:05 IST

ಲಾಸ್‌ ಎಂಜಲೀಸ್‌ (ಎಎಫ್‌ಪಿ): 1976ರ ಮಾಂಟ್ರಿಯಲ್‌ ಒಲಿಂಪಿಕ್ಸ್‌ನ ಡೆಕಥ್ಲಾನ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಅಮೆರಿಕದ ಬ್ರೂಸ್‌ ಕ್ಯಾಟಲಿನ್‌ ಜೆನ್ನರ್‌ ಈಗ ಅಜ್ಜಿಯಾಗಿದ್ದಾರೆ! ಏಕೆಂದರೆ, 65 ವರ್ಷದ ಜೆನ್ನರ್‌ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

‘ಇಷ್ಟು ವರ್ಷ ಸಾಕಷ್ಟು ಕಷ್ಟಪಟ್ಟಿ ದ್ದೇನೆ. ನನ್ನ ಬದುಕನ್ನೇ ಹಾಳು ಮಾಡಿ ಕೊಂಡಿದ್ದೇನೆ. ನಾನೀಗ ಸ್ವತಂತ್ರಳು. ಇನ್ನು ಮುಂದೆ ನನ್ನನ್ನು ಕ್ಯಾಟಲಿನ್‌ ಎಂದು ಕರೆಯಿರಿ. ಈಗ ಯಾವ ರಹಸ್ಯಗಳನ್ನೂ ಮುಚ್ಚಿಟ್ಟಿಲ್ಲ’ ಎಂದು ಜೆನ್ನರ್‌ ಹೇಳಿಕೊಂಡಿದ್ದಾರೆ. ಅವರು ಹೊಸ ರೂಪವನ್ನು ‘ವ್ಯಾನಿಟಿ ಫೇರ್‌’ ನಿಯತಕಾಲಿಕೆ ಪ್ರಕಟಿಸಿದೆ.

ಲಿಂಗ ಬದಲಿಸಿಕೊಳ್ಳುವ ಸಲುವಾಗಿ ಅವರು ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೂರು ಮದುವೆಯಾಗಿರುವ ಜೆನ್ನರ್ ಆರು ಮಕ್ಕಳನ್ನು ಹೊಂದಿದ್ದಾರೆ. ಈ   ಅಥ್ಲೀಟ್‌ 1975ರಲ್ಲಿ  ಪ್ಯಾನ್‌ ಅಮೆರಿಕ ಕ್ರೀಡಾ ಕೂಟದಲ್ಲೂ ಚಿನ್ನ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.