ADVERTISEMENT

ಟೆನಿಸ್‌: ಫೆಡರರ್‌ ಮಣಿಸಿದ ವಾವ್ರಿಂಕಾ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 20:08 IST
Last Updated 20 ಏಪ್ರಿಲ್ 2014, 20:08 IST

ಮಾಂಟೆ ಕಾರ್ಲೊ (ಎಎಫ್‌ಪಿ):   ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ಇಲ್ಲಿ ಕೊನೆಗೊಂಡ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ವಾವ್ರಿಂಕಾ 4–6, 7–6, 6–2ರಲ್ಲಿ ತಮ್ಮ ದೇಶದವರೇ ಆದ ರೋಜರ್‌ ಫೆಡರರ್‌್ ಅವರನ್ನು ಮಣಿಸಿದರು.

ಸ್ವಿಟ್ಜರ್‌ಲೆಂಡ್‌ ಪರ ಡಬಲ್ಸ್‌ನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಈ ಆಟಗಾರರು,  ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರಿಂದ ಈ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ವಾವ್ರಿಂಕಾ  ತಮ್ಮ ಸಹ ಆಟಗಾರನನ್ನು ಮಣಿಸಿ ಚೊಚ್ಚಲ ಬಾರಿಗೆ ಮಾಸ್ಟರ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.