ADVERTISEMENT

ಟೇಬಲ್‌ ಟೆನಿಸ್: ಶೃತಿ, ಬೌಮನ್‌ಗೆ ಸಿಂಗಲ್ಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಬೆಂಗಳೂರು: ಇನ್‌ಫೋಸಿಸ್‌ನ ಜಿ.ಶೃತಿ ಮತ್ತು ಬಾಷ್‌ನ ಬೌಮನ್‌ ಕ್ಲಾಡಿಯಸ್‌ ಅವರು ವಿಕ್ಟರಿ ಈವೆಂಟ್ಸ್‌ ಆಶ್ರಯದಲ್ಲಿ ನಡೆದ  ಕಾರ್ಪೋರೇಟ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಗೋಪಾಲನ್‌ ಅಂತರರಾಷ್ಟ್ರೀಯ ಶಾಲೆಯಲ್ಲಿ  ಭಾನುವಾರ ನಡೆದ  ಮಹಿಳಾ ವಿಭಾಗದ ಫೈನಲ್‌ ನಲ್ಲಿ ಶೃತಿ  11–9, 9–11, 9–11, 11–7, 11–7ರಲ್ಲಿ ಕ್ವಾಲ್‌ ಕಾಮ್‌ನ ದೀಪ್ತಿ ಕನ್ಸಾಲ್‌ ಎದುರು ಗೆದ್ದರು.

ಪುರುಷರ ಫೈನಲ್‌ನಲ್ಲಿ ಬೌಮನ್‌ ಕ್ಲಾಡಿಯಸ್‌ 11–2, 11–5, 11–13, 11–5ರಲ್ಲಿ ರಾಯಿಟರ್ಸ್‌ನ ಬಿ.ಜಗದೀಶ್‌ ಅವ ರನ್ನು ಮಣಿಸಿದರು.

ಸತ್ಯಜಿತ್‌ ಜೋಡಿಗೆ ಪ್ರಶಸ್ತಿ: ಪುರುಷರ ವಿಭಾಗದ ಡಬಲ್ಸ್‌ ಫೈನಲ್‌ನಲ್ಲಿ ದೀಕ್ಷಾ ಕಂಪೆನಿಯ, ಸಿ.ಆರ್‌.ಸತ್ಯಜಿತ್‌ ಮತ್ತು ವಿಕ್ರಂ ಚಂದ್ರ 11–7, 12–10, 11–7ರಲ್ಲಿ  ಡೆಲ್‌ನ ಮಣಿದೀಪ್‌ ಮತ್ತು ಅರವಿಂದನ್‌  ಅವರನ್ನು ಸೋಲಿಸಿದರು.

ಮಹಿಳೆಯರ ಡಬಲ್ಸ್‌ ಫೈನಲ್‌ ನಲ್ಲಿ ಇನ್‌ಫೋಸಿಸ್‌ನ ಜಿ.ಶೃತಿ ಮತ್ತು ಅಮೂಲ್ಯ 16–14, 12–10,  9–11, 13–11ರಲ್ಲಿ ಎಸ್‌ಎಪಿಯ ಜಿ.ಸ್ವಾತಿ ಮತ್ತು ನಬಿಲಾ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿ ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.