ADVERTISEMENT

ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್: ಕಿದಂಬಿ ಶ್ರೀಕಾಂತ್‌ಗೆ ಪ್ರಶಸ್ತಿ ಸಂಭ್ರಮ

ಪಿಟಿಐ
Published 22 ಅಕ್ಟೋಬರ್ 2017, 19:20 IST
Last Updated 22 ಅಕ್ಟೋಬರ್ 2017, 19:20 IST
ಪ್ರಶಸ್ತಿ ಗೆದ್ದ ಭಾರತದ ಆಟಗಾರ ಕಿದಂಬಿ ಶ್ರೀಕಾಂತ್‌
ಪ್ರಶಸ್ತಿ ಗೆದ್ದ ಭಾರತದ ಆಟಗಾರ ಕಿದಂಬಿ ಶ್ರೀಕಾಂತ್‌   

ಒಡೆನ್ಸ್‌: ಭಾರತದ ಅಗ್ರಗಣ್ಯ ಆಟಗಾರ ಕಿದಂಬಿ ಶ್ರೀಕಾಂತ್‌ ಡೆನ್ಮಾರ್ಕ್‌ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.

ಮೂರನೇ ಸೂಪರ್ ಸರಣಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್ ಹ್ಯಾಟ್ರಿಕ್ ಸಾಧನೆ ಮಾಡಿ ದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು 21–10, 21–5ರಲ್ಲಿ ನೇರ ಗೇಮ್‌ಗಳಿಂದ ಕೊರಿಯಾದ ಹಿರಿಯ ಆಟಗಾರ ಲೀ ಹ್ಯುಯಾನ್ ಅವರನ್ನು ಮಣಿಸಿದರು.

ಶ್ರೀಕಾಂತ್ ಕೇವಲ 25 ನಿಮಿಷ ಗಳಲ್ಲಿ ಪಂದ್ಯ ಗೆದ್ದರು. ಎರಡೂ ಗೇಮ್‌ ಗಳಲ್ಲಿ ಭಾರತದ ಆಟಗಾರ ಪ್ರಾಬಲ್ಯ ಮೆರೆದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಶ್ರೀಕಾಂತ್ ಎಂಟನೇ ಸ್ಥಾನದಲ್ಲಿದ್ದಾರೆ. ಒಂದು ವರ್ಷದಲ್ಲಿ ಮೂರು ಸೂಪರ್ ಸರಣಿ ಪ್ರಶಸ್ತಿ ಗೆದ್ದುಕೊಳ್ಳುವುದು ಅವರ ಕನ ಸಾಗಿತ್ತು.

ADVERTISEMENT

‘ಫೈನಲ್ ಪಂದ್ಯದಲ್ಲಿ ಆಡಿದ ರೀತಿ ಖುಷಿ ಕೊಟ್ಟಿದೆ. ಟೂರ್ನಿಯಲ್ಲಿ ಕಠಿಣ ಎದುರಾಳಿಗಳ ಎದುರು ಗೆದ್ದಿದ್ದೇನೆ. ಮುಂದಿನ ಪಂದ್ಯಗಳಲ್ಲಿ ಪ್ರಶಸ್ತಿ ಗೆಲ್ಲುವ ಉತ್ಸಾಹ ಇಮ್ಮಡಿಸಿದೆ’ ಎಂದು ಶ್ರೀಕಾಂತ್ ಹೇಳಿದ್ದಾರೆ.

‘ಹ್ಯುಯಾನ್‌ ಈ ಟೂರ್ನಿಯಲ್ಲಿ ಆಡಿದ ಹಿರಿಯ ಹಾಗೂ ಅನುಭವಿ ಆಟಗಾರ. ಅವರ ಎದುರು ಉತ್ತಮ ವಾಗಿ ಆಡಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ಇಂಟನಾನ್‌ಗೆ ಪ್ರಶಸ್ತಿ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ರಾಚನೊಕ್ ಇಂಟನಾನ್ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು 14–21, 21–15, 21–19ರಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಗೆದ್ದರು. ಈ ಋತುವಿನಲ್ಲಿ ಇಂಟನಾನ್‌ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.