ADVERTISEMENT

ಭಾರತದ ವಿರುದ್ಧ ಟಾಸ್‌ ಗೆದ್ದ ವೆ‍ಸ್ಟ್‌ ಇಂಡೀಸ್‌ ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2017, 15:25 IST
Last Updated 25 ಜೂನ್ 2017, 15:25 IST
ಭಾರತದ ವಿರುದ್ಧ ಟಾಸ್‌ ಗೆದ್ದ ವೆ‍ಸ್ಟ್‌ ಇಂಡೀಸ್‌ ಬೌಲಿಂಗ್‌ ಆಯ್ಕೆ
ಭಾರತದ ವಿರುದ್ಧ ಟಾಸ್‌ ಗೆದ್ದ ವೆ‍ಸ್ಟ್‌ ಇಂಡೀಸ್‌ ಬೌಲಿಂಗ್‌ ಆಯ್ಕೆ   

ಪೋರ್ಟ್ ಆಫ್ ಸ್ಪೇನ್‌: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮಳೆಯಿಂದಾಗಿ ಮೊದಲ ಪಂದ್ಯ ಅರ್ಧಕ್ಕೇ ರದ್ದಾಗಿತ್ತು.

ಭಾನುವಾರ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಬೌಲಿಂಗ್‌ ಮಾಡಿಕೊಂಡಿದೆ.

ಪಂದ್ಯದ ಆರಂಭದಲ್ಲಿ ಮಳೆಯ ಆತಂಕ ಎದುರಾಗಿದ್ದು, ಪಂದ್ಯವನ್ನು 43 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ.

ADVERTISEMENT

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 4.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 30 ರನ್‌ ಗಳಿಸಿದೆ(ರಹಾನೆ ಬ್ಯಾಟಿಂಗ್‌ 17, ಧವನ್‌ ಬ್ಯಾಟಿಂಗ್‌ 13).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.