ADVERTISEMENT

ರಾಜ್ಯ ಕುಸ್ತಿ ತಂಡಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ದಾವಣಗೆರೆ: ಉತ್ತರಪ್ರದೇಶದ ಗೊಂಡಾದಲ್ಲಿ ಅಕ್ಟೋಬರ್‌ 22 ರಿಂದ 25ರವರೆಗೆ ನಡೆಯಲಿರುವ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ರಾಜ್ಯ ತಂಡವನ್ನು ಬೆಂಗಳೂರಿನಲ್ಲಿ ಭಾನುವಾರ ಟ್ರಯಲ್ಸ್‌ ನಂತರ ಆಯ್ಕೆ ಮಾಡಲಾಗಿದೆ. ಒಟ್ಟು 16 ಮಂದಿಯ ತಂಡದಲ್ಲಿ 13 ಮಂದಿ ದಾವಣಗೆರೆ ಕ್ರೀಡಾ ನಿಲಯದ ಕುಸ್ತಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ರಾಜ್ಯ ಪುರುಷರ ತಂಡ ಇಂತಿದೆ: ಫ್ರೀಸ್ಟೈಲ್‌ ವಿಭಾಗ: ಕೆಂಚಪ್ಪ (ದಾವಣಗೆರೆ, 57 ಕೆ.ಜಿ ವಿಭಾಗ), ಆಕಾಶ್‌ ಡಿ. (ದಾವಣಗೆರೆ, 61 ಕೆ.ಜಿ), ಪಾಲಾಕ್ಷ ಗೌಡ (ಎಸ್‌ಟಿಸಿ,  ಧಾರವಾಡ 66 ಕೆ.ಜಿ), ಸತೀಶ್ ಪಡತಾರೆ (ಎಸ್‌ಟಿಸಿ, ಧಾರವಾಡ, 70 ಕೆ.ಜಿ), ಕಾರ್ತಿಕ್‌ ಕಾಟೆ (ದಾವಣಗೆರೆ, 74 ಕೆ.ಜಿ), ಎಸ್‌.ಕಿರಣ್‌ (ದಾವಣಗೆರೆ, 86 ಕೆ.ಜಿ), ಮಲ್ಲಪ್ಪ ಪಾಟೀಲ (ಕೆಎಸ್‌ಪಿ, ದಾವಣಗೆರೆ, 96 ಕೆ.ಜಿ.), ಬೀರೇಶ್‌ ಗೌಡ (ಅಥಣಿ, 96 ರಿಂದ 120 ಕೆ.ಜಿ.)

ಗ್ರೀಕೊ ರೋಮನ್‌: ಪ್ರಭಾಕರ ಫಡಕೆ (ದಾವಣಗೆರೆ, 59 ಕೆ.ಜಿ), ಮಂಜುನಾಥ ನಾಗಾರಾಳ (ದಾವಣಗೆರೆ, 65 ಕೆ.ಜಿ), ಬಸಪ್ಪ ಮಂದಾಪುರ (ದಾವಣಗೆರೆ, 71 ಕೆ.ಜಿ), ರಫೀಕ್‌ ಹೊಳಿ (ದಾವಣಗೆರೆ, 75 ಕೆ.ಜಿ), ಆನಂದ ಎಲ್‌. (ದಾವಣಗೆರೆ, 80  ಕೆ.ಜಿ), ಚಂದ್ರಶೇಖರ (ದಾವಣಗೆರೆ, 85 ಕೆ.ಜಿ), ಮಧುಸೂದನ್‌ (ದಾವಣಗೆರೆ, 96 ಕೆ.ಜಿ), ಶ್ರೀಶೈಲ ಯಲಶೆಟ್ಟಿ (ಕೆಎಸ್‌ಪಿ, ದಾವಣಗೆರೆ, 96 ರಿಂದ 130 ಕೆ.ಜಿ). ದಾವಣಗೆರೆಯ ಆರ್‌.ಶಿವಾನಂದ ತಂಡದ ತರಬೇತುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.