ADVERTISEMENT

ವಿಂಬಲ್ಡನ್‌: ಪೇಸ್‌ಗೆ ಮುನ್ನಡೆ, ಬೋಪಣ್ಣ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 12:03 IST
Last Updated 5 ಜುಲೈ 2015, 12:03 IST

ಲಂಡನ್‌ (ಪಿಟಿಐ): ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತಕ್ಕೆ ಮಿಶ್ರ ಫಲ ದೊರೆತಿದೆ. ಲಿಯಾಂಡರ್‌ ಪೇಸ್‌ ಹಾಗೂ ಮಾರ್ಟಿನಾ ಹಿಂಗಿಸ್‌ ಜೋಡಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆ ಪಡೆದರೆ, ರೋಹಣ ಬೋಪಣ್ಣ ಹಾಗೂ ಮರಿಯಾ ಜೋಸ್‌ ಅವರ ಜೋಡಿ ಸೋಲುಂಡು ಟೂರ್ನಿಯಿಂದ ಹೊರ ಬಿದ್ದಿದೆ.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಪೇಸ್‌ ಹಾಗೂ ಹಿಂಗಿಸ್‌ ಜೋಡಿ, 6–4, 6–2ರಲ್ಲಿ ಫ್ರೆಂಚ್‌ ಜೋಡಿ ಎಡ್ವರ್ಡ್‌ ರೋಜರ್‌ ವೆಸ್ಸೆಲಿನ್ ಹಾಗೂ ಅಲಿಜ್‌ ಕಾರ್ನೆಟ್‌ ಅವರನ್ನು ಮಣಿಸಿತು.

ಭಾರತ–ಸ್ವಿಸ್ ಜೋಡಿ ಮುಂದಿನ ಸುತ್ತಿನಲ್ಲಿ ನ್ಯೂಜಿಲೆಂಡ್‌ನ ಅರ್ಟೆಮ್‌ ಸಿತಾಕ್ ಹಾಗೂ ಆಸ್ಟ್ರೇಲಿಯಾದ ಅನಸ್ತಾಸಿಯಾ ರೊಡಿನೊವಾ ಅವರ ಸವಾಲು ಎದುರಿಸಲಿದೆ.

ADVERTISEMENT

ಇನ್ನು, ಬೋಪಣ್ಣ– ಮರಿಯಾ ಜೋಸ್‌ ಜೋಡಿಯು 2–6, 4–6ರಲ್ಲಿ ರೊಮೆನಿಯಾದ ಹೊರಿಯಾ ಟೆಕಾವು ಹಾಗೂ ಸ್ಲೊವೆನಿಯಾದ ಕತರಿನಾ ರೆಬೊಟ್ನಿಕ್ ಎದುರು ಸೋಲುಕಂಡಿತು.

ಭಾರತ ಮಹೇಶ್ ಭೂಪತಿ ಅವರು ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರ ಬಿದ್ದಿದ್ದರು.

ಸೋಮವಾರ ನಡೆಯುವ ಕ್ವಾರ್ಟರ್‌ ಫೈನಲ್‌ ಸುತ್ತಿನ ಪಂದ್ಯಗಳಲ್ಲಿ ಭಾರತ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್‌ ಹಾಗೂ ಸುಮಿತ್ ನಗಲ್ ಅವರು ಅದೃಷ್ಠ ಪರೀಕ್ಷಿಸಲಿದ್ದಾರೆ.

ಟೂರ್ನಿಯಲ್ಲಿ ಸಾನಿಯಾ ಅವರು ಮಾರ್ಟಿನಾ ಹಿಂಗಿಸ್ ಅವರ ಜತೆಗೂಡಿ ಆಡುತ್ತಿದ್ದಾರೆ. ಹಿಂಗಿಸ್‌ ಮಿಶ್ರ ಡಬಲ್ಸ್‌ನಲ್ಲಿ ಪೇಸ್‌ ಜತೆಗೂ ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಅವರೊಂದಿಗೂ ಆಡುತ್ತಿದ್ದಾರೆ.

ಇನ್ನು, ಸುಮಿತ್ ನಗಲ್ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.