ADVERTISEMENT

ವೈಎಮ್‌ಎಮ್‌ಎ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಬೆಂಗಳೂರು:   ವೈಎಮ್‌ಎಮ್ಎ ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಸಬ್‌ ಜೂನಿ ಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ ಷಿಪ್‌ನಲ್ಲಿ ಮಂಗಳವಾರ ಗೆಲುವು ದಾಖಲಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ವೈಎಮ್‌ಎಮ್‌ಎ ತಂಡ 32–23ರಲ್ಲಿ ಬಿಸಿಬಿಸಿ ತಂಡವನ್ನು ಮಣಿಸಿದೆ.  ವಿಜಯೀ ತಂಡ ವಿರಾಮದ ವೇಳೆಗೆ 10–15ರಲ್ಲಿ ಹಿನ್ನಡೆ ಹೊಂದಿತ್ತು.

ದಿನದ ಇತರ ಪಂದ್ಯಗಳಲ್ಲಿ ಬೀಗಲ್ಸ್‌ 38–18ರಲ್ಲಿ ಜೆಎಸ್‌ಸಿ ವಿರುದ್ಧವೂ, ಜೆಎಸ್‌ಸಿ 31–22ರಲ್ಲಿ ವೈಎಮ್‌ಎಮ್‌ಎ ಮೇಲೂ, ಬೀಗಲ್ಸ್‌ 41–35ರಲ್ಲಿ ಬಿಸಿಬಿಸಿ ಎದುರೂ ಜಯಗಳಿಸಿವೆ.

ADVERTISEMENT

ಬಾಲಕಿಯರ ವಿಭಾಗಗಳಲ್ಲಿ ವಸಂತ ನಗರ ಕ್ಲಬ್‌ 37–27ರಲ್ಲಿ ಅಪ್ಪಯ್ಯ  ಮೇಲೂ, ಬೀಗಲ್ಸ್‌ 39–08ರಲ್ಲಿ ಬಿಸಿ ಬಿಸಿ ತಂಡದ ವಿರುದ್ಧವೂ, ವಸಂತನಗರ 30–12ರಲ್ಲಿ ಬಿಸಿಬಿಸಿ ಎದುರೂ, ಬೀಗಲ್ಸ್‌ 34–28ರಲ್ಲಿ ಅಪ್ಪಯ್ಯ ಕ್ಲಬ್‌ ವಿರುದ್ಧವೂ ಗೆಲುವು ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.