ADVERTISEMENT

ಶೂಟಿಂಗ್: ಚಿನ್ನ ಗೆದ್ದ ಮನು ಭಾಕರ್

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌; ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಪಿಟಿಐ
Published 24 ಮಾರ್ಚ್ 2018, 19:46 IST
Last Updated 24 ಮಾರ್ಚ್ 2018, 19:46 IST
ಮನು ಭಾಕರ್‌
ಮನು ಭಾಕರ್‌   

ಸಿಡ್ನಿ: ಭಾರತದ ಮನು ಭಾಕರ್ ಅವರು ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಶನಿವಾರ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ವೈಯಕ್ತಿಕ ಹಾಗೂ ತಂಡ ವಿಭಾಗಗಳೆರಡರಲ್ಲೂ ಮನು ಚಿನ್ನ ಜಯಿಸಿದ್ದಾರೆ. ಪುರುಷರ ವಿಭಾಗದಲ್ಲಿ ಗೌರವ್‌ ರಾಣಾ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಮೆಕ್ಸಿಕೊದಲ್ಲಿ ನಡೆದಿದ್ದ ಸೀನಿಯರ್ ವಿಶ್ವಕಪ್‌ನಲ್ಲಿ ಮನು ಚಿನ್ನ ಗೆದ್ದಿದ್ದರು. 16 ವರ್ಷದ ಯುವ ಶೂಟರ್‌ ಇಲ್ಲಿ ನಡೆದ ಮಹಿಳೆಯರ 10ಮೀ ಏರ್‌ ಪಿಸ್ತೂಲ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

ADVERTISEMENT

ಮನು 235.9 ಪಾಯಿಂಟ್ಸ್‌ ಕಲೆಹಾಕಿದರು. ಪುರುಷರ 10ಮೀ ಏರ್ ಪಿಸ್ತೂಲ್‌ ವಿಭಾಗದಲ್ಲಿ ಗೌರವ್‌ ರಾಣಾ ಎರಡನೇ ಸ್ಥಾನ ಗಳಿಸಿದರು. ಭಾರತದ ಅನ್‌ಮೋಲ್‌ ಜೈನ್ ಕಂಚು ಗೆದ್ದರು. ರಾಣಾ ಫೈನಲ್‌ನಲ್ಲಿ 233.9 ಪಾಯಿಂಟ್ಸ್ ಗಳಿಸಿದರೆ, ಅನ್‌ಮೋಲ್‌ 215.1 ಪಾಯಿಂಟ್ಸ್‌ಗಳಿಂದ ಮೂರನೇ ಸ್ಥಾನ ಪಡೆದರು. ಚೀನಾದ ಜೆಹವೊ ವಾಂಗ್‌ ಮೊದಲ ಸ್ಥಾನ ಗಳಿಸಿದರು. ಮನು, ರಾಣಾ, ಮಹಿಮಾ ಅಗರವಾಲ್‌ ಅವರನ್ನು ಒಳಗೊಂಡ ಭಾರತ ಮಹಿಳೆಯರ ತಂಡ ಚಿನ್ನಕ್ಕೆ ಕೊರಳೊಡ್ಡಿತು.

ಚೀಮಾ, ರಾಣಾ ಮತ್ತು ಅನ್‌ಮೋಲ್ ಅವರನ್ನು ಒಳಗೊಂಡ ಭಾರತ ತಂಡ ಚಿನ್ನ ಗೆದ್ದಿದೆ. ಜವಾಂಡ, ಆರ್ಯ, ಆದರ್ಶ್ ಸಿಂಗ್‌ ಇದ್ದ ಭಾರತದ ಇನ್ನೊಂದು ತಂಡ ಕಂಚಿಗೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.