ADVERTISEMENT

ಸಂತಸ ನೀಡಿದ ಆಟ: ಮನೀಷ್‌ ಪಾಂಡೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಅಬುಧಾಬಿ (ಪಿಟಿಐ): ಐಪಿಎಲ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯ ವಾಗಿರುವುದು ಸಂತಸ ಉಂಟುಮಾಡಿದೆ ಎಂದು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಆಟಗಾರ ಮನೀಷ್‌ ಪಾಂಡೆ ಹೇಳಿದ್ದಾರೆ.

‘ಹೋದ ಋತುವಿನಲ್ಲಿ ಪುಣೆ ವಾರಿಯರ್ಸ್‌ ಪರ ಕೆಲವು ಪಂದ್ಯಗಳಲ್ಲಿ ಉತ್ತಮ ಆಟ ತೋರಿದ್ದೆ. ಆದರೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ.  ಈ ಬಾರಿ ಮೊದಲ ಪಂದ್ಯದಲ್ಲೇ ಮಿಂಚಿ ದ್ದೇನೆ. ಇದೇ ರೀತಿಯ ಆಟ ಮುಂದುವ ರಿಸುವ ವಿಶ್ವಾಸವಿದೆ’ ಎಂದು ಕರ್ನಾಟ ಕದ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

ಅಬುಧಾಬಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನೈಟ್‌ರೈಡರ್ಸ್‌ ತಂಡ 41 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಜಯ ಸಾಧಿಸಿತ್ತು. ಗೆಲುವಿಗೆ 164 ರನ್‌ಗಳ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್‌ 20 ಓವರ್‌ ಗಳಲ್ಲಿ 7 ವಿಕೆಟ್‌ಗೆ 122 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಈ ಪಂದ್ಯದಲ್ಲಿ ಪಾಂಡೆ 53 ಎಸೆತಗಳಲ್ಲಿ 64 ರನ್‌ ಗಳಿಸಿದ್ದರು. ಐಪಿಎಲ್‌ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಗೌರವ ಹೊಂದಿರುವ ಪಾಂಡೆ ಆ ಬಳಿಕ ನಿರೀಕ್ಷಿತ ಪ್ರದರ್ಶನ ತೋರಿಲ್ಲ. 2009ರ ಟೂರ್ನಿ ಯಲ್ಲಿ ಪಾಂಡೆ ಶತಕ ಗಳಿಸಿದ್ದರು.
ಜಾಕ್‌ ಕಾಲಿಸ್‌ ಜೊತೆ ಮತ್ತೆ ಆಡುವ ಅವಕಾಶ ದೊರೆತ ಕಾರಣ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಪಾಂಡೆ ಇದೇ ವೇಳೆ ನುಡಿದಿದ್ದಾರೆ.

ಕಾಲಿಸ್‌ ಮತ್ತು ಪಾಂಡೆ ಈ ಹಿಂದೆ ರಾಯಲ್‌ ಚಾಲೆಂಜರ್ಸ್‌ ತಂಡದ ಪರ ಜೊತೆಯಾಗಿ ಆಡಿದ್ದರು. ‘ಕಾಲಿಸ್‌ ಜೊತೆ ಆಡುವ ಅವಕಾಶ ದೊರೆತಾಗ ಹಿಂದಿನ ಪಂದ್ಯಗಳ ನೆನಪಾಯಿತು. ಆರ್‌ಸಿಬಿ ತಂಡದಲ್ಲಿದ್ದಾಗ ಇಬ್ಬರೂ ಹಲವು ಸಲ ಉತ್ತಮ ಜೊತೆಯಾಟ ನೀಡಿದ್ದೆವು. ಆದ್ದರಿಂದ ಅವರೊಟ್ಟಿಗೆ ಹೊಂದಾಣಿಕೆಯಿಂದ ಆಡಲು ಸಾಧ್ಯ ವಾಯಿತು. ಬ್ಯಾಟಿಂಗ್‌ ವೇಳೆ ಅವರು ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು’ ಎಂದು ಪಾಂಡೆ ನುಡಿದಿದ್ದಾರೆ.

ಪಾಂಡೆ ಮತ್ತು ಕಾಲಿಸ್‌ ಎರಡನೇ ವಿಕೆಟ್‌ಗೆ 131 ರನ್‌ ಪೇರಿಸಿದ್ದ ಕಾರಣ ನೈಟ್‌ರೈಡರ್ಸ್‌ ತಂಡ ಸವಾಲಿನ ಮೊತ್ತ ಕಲೆಹಾಕಿತ್ತು.

ಸ್ಕೋರ್ ವಿವರ:
ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163

ಮುಂಬೈ ಇಂಡಿಯನ್ಸ್‌  20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 122
ಮೈಕ್‌ ಹಸ್ಸಿ ಬಿ ಸುನಿಲ್‌ ನಾರಾಯಣ್‌  03
ಆದಿತ್ಯ ತಾರೆ ಸಿ ಆ್ಯಂಡ್‌ ಬಿ ಶಕೀಬ್‌ ಅಲ್ ಹಸನ್‌  24
ಅಂಬಟಿ ರಾಯುಡು ಸ್ಟಂಪ್ಡ್‌ ರಾಬಿನ್‌ ಉತ್ತಪ್ಪ ಬಿ ಸುನಿಲ್‌ ನಾರಾಯಣ್‌  48
ರೋಹಿತ್‌ ಶರ್ಮ ಸಿ ಜಾಕ್‌ ಕಾಲಿಸ್‌ ಬಿ ಮಾರ್ನ್‌ ಮಾರ್ಕೆಲ್‌  27
ಕೀರನ್‌ ಪೊಲಾರ್ಡ್‌ ಔಟಾಗದೆ  06
ಕೋರಿ ಆ್ಯಂಡರ್‌ಸನ್‌ ಬಿ ಸುನಿಲ್‌ ನಾರಾಯಣ್‌  02
ಹರಭಜನ್‌ ಸಿಂಗ್‌ ಬಿ ಸುನಿಲ್‌ ನಾರಾಯಣ್‌  00
ಸಿ.ಎಂ.ಗೌತಮ್‌ ಸ್ಟಂಪ್ಡ್‌ ರಾಬಿನ್‌ ಉತ್ತಪ್ಪ ಬಿ ಪಿಯೂಷ್‌್ ಚಾವ್ಲಾ  07
ಇತರೆ (ಬೈ–4, ವೈಡ್‌–1)  05
ವಿಕೆಟ್‌ ಪತನ: 1–24 (ಹಸ್ಸಿ; 4.4); 2–40 (ತಾರೆ; 7.5); 3–101 (ರೋಹಿತ್‌; 15.2); 4–106 (ರಾಯುಡು; 16.1); 5–113 (ಆ್ಯಂಡರ್‌ಸನ್‌; 18.1); 6–113 (ಹರಭಜನ್‌; 18.3); 7–122 (ಗೌತಮ್‌; 19.6)
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 2–0–15–0, ಮಾರ್ನ್‌ ಮಾರ್ಕೆಲ್‌ 4–0–16–1, ಸುನಿಲ್‌ ನಾರಾಯಣ್‌ 4–0–20–4, ಶಕೀಬ್‌ ಅಲ್‌ ಹಸನ್‌ 4–0–29–1, ಜಾಕ್‌ ಕಾಲಿಸ್‌ 3–0–23–0, ಪಿಯೂಷ್‌ ಚಾವ್ಲಾ 3–0–15–1 (ವೈಡ್‌–1)
ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್‌ಗೆ 41 ರನ್‌ಗಳ ಜಯ ಹಾಗೂ 2 ಪಾಯಿಂಟ್‌. ಪಂದ್ಯ ಶ್ರೇಷ್ಠ: ಜಾಕ್‌ ಕಾಲಿಸ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.