ADVERTISEMENT

ಸಲಹೆ ಪಡೆದು ಮುಂದಿನ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ದೇಹದಲ್ಲಿ ಪುರುಷ ಹಾರ್ಮೋನ್‌ ಹೆಚ್ಚು ಇದೆ ಎಂಬ ವಿವಾದಕ್ಕೊಳಗಾಗಿದ್ದ ಭಾರ ತದ ಅಥ್ಲೀಟ್‌ ದ್ಯುತಿ ಚಾಂದ್‌ ಅವರ ಮೇಲಿನ ನಿಷೇಧ ತೆರವುಗೊಳಿ ಸಿರುವ  ನ್ಯಾಯಾಲಯದ ತೀರ್ಪಿನ ಕುರಿತು ತಜ್ಞರು ಹಾಗೂ ಅಂತರ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ (ಐಒಸಿ)  ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಐಎಎಎಫ್‌ ತಿಳಿಸಿದೆ.

ತಮ್ಮ ಮೇಲಿನ ನಿಷೇಧ ಹಿಂದಕ್ಕೆ ಪಡೆದು ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ಒಡಿಶಾದ 19 ವರ್ಷದ ಅಥ್ಲೀಟ್‌ ದ್ಯುತಿ ನ್ಯಾಯಾಲಯಕ್ಕೆ ಮನವಿ ಸಲ್ಲಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮೂರು ಸದಸ್ಯರ ಪೀಠವು ದ್ಯುತಿ ಅವರ ಮನವಿಯನ್ನು ಮಾನ್ಯ ಮಾಡಿತ್ತು. ಅಲ್ಲದೆ ಐಎಎಎಫ್‌ ಈ ಪ್ರಕರಣವನ್ನು ಸಾಬೀತುಮಾಡಲು ಬೇಕಿ ರುವ ದಾಖಲೆ ನೀಡಿದರೆ ವಿಚಾರಣೆ ಮುಂದುವರಿಸುವುದಾಗಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.