ADVERTISEMENT

ಸಾನಿಯಾ–ಬೋಪಣ್ಣ ಶುಭಾರಂಭ

ನಡಾಲ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಸಾನಿಯಾ–ಬೋಪಣ್ಣ ಶುಭಾರಂಭ
ಸಾನಿಯಾ–ಬೋಪಣ್ಣ ಶುಭಾರಂಭ   

ಮೆಲ್ಬರ್ನ್‌ (ಪಿಟಿಐ): ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ರಫೆಲ್‌ ನಡಾಲ್‌ ಈ ಬಾರಿ ಯೂ ಟ್ರೋಫಿ ಎತ್ತಿ ಹಿಡಿಯುವ ಹಾದಿ ಯಲ್ಲಿ ಸಾಗಿದ್ದಾರೆ. ಸಿಂಗಲ್ಸ್‌ ವಿಭಾಗದಲ್ಲಿ ಅವರು 16ರ ಘಟ್ಟ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್‌ 4–6, 6–3, 6–7, 6–3, 6–2ರಲ್ಲಿ ಜರ್ಮನಿಯ ಅಲೆಕ್ಸಾಂ ಡರ್‌ ಜ್ವೆರೆವ್‌ ಎದುರು ಪ್ರಯಾಸದ ಗೆಲುವು ಸಾಧಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬಲ್ಗೇರಿಯಾದ ಗ್ರಿಗೋರ್‌ ಡಿಮಿಟ್ರೋವ 6–3, 6–2, 6–4ರಲ್ಲಿ ಫ್ರಾನ್ಸ್‌ನ ರಿಚರ್ಡ್‌  ಗ್ಯಾಸ್ಕೂಟ್‌ ಮೇಲೆ ಜಯ ಪಡೆದರು. ಆದರೆ ಸ್ಪೇನ್‌ನ ಡೇವಿಡ್‌ ಫೆರರ್‌ ನಿರಾಸೆ ಕಂಡರು. ಇವರು 5–7, 7–6, 6–7, 4–6ರಲ್ಲಿ ರಾಬೆರ್ಟೊ ಅಗಟ್‌ ವಿರುದ್ಧ ಸೋತರು.

ADVERTISEMENT

ಸೆರೆನಾ ಜಯದ ಓಟ: ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯ ದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ 6–1, 6–3ರಲ್ಲಿ ತಮ್ಮದೇ ದೇಶದ ಶ್ರೇಯಾಂಕ ರಹಿತ ಆಟಗಾರ್ತಿ ನಿಕೊಲೆ ಗಿಬ್ಸ್‌ ಅವರನ್ನು ಮಣಿಸಿದರು.

ಶುಭಾರಂಭ: ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಕ್ರೊಯೇಷ್ಯಾದ ಇವಾನ್‌ ದೊಡಿಗ್‌ ಮೊದಲ ಸುತ್ತಿನ ಪಂದ್ಯದಲ್ಲಿ 7–5, 6–4ರಲ್ಲಿ ಅಮೆರಿಕ ಓಪನ್ ಟೂರ್ನಿಯ ಹಾಲಿ ಚಾಂಪಿಯನ್‌ ಲೌರಾ ಸಿಗೆ ಮುಂಡ್‌ ಮತ್ತು ಮ್ಯಾಟ್‌ ಪವಿಕ್‌ ಎದುರು ಗೆದ್ದರು.

ಇನ್ನೊಂದು ಪಂದ್ಯದಲ್ಲಿ ರೋಹನ್‌ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲ್‌ ದಬ್ರೋಸ್ಕಿ 6–4, 6–7, 10–7ರಲ್ಲಿ ಮೈಕಲ್‌ ವೀನಸ್‌–ಕಟಾರಿನಾ ಸ್ರೆಬೊಂಟಿಕ್‌ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಸಿದ್ದಾಂತ ಭಾಟಿಯಾ 6–2, 6–7, 5–7ರಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್‌ ಕ್ರೊಕ್ರಾಕ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.