ADVERTISEMENT

ಸುಪ್ರೀಂ ಕೋರ್ಟ್‌ ತೀರ್ಪು: ಸ್ವಾಗತ

ಪಿಟಿಐ
Published 20 ಜನವರಿ 2017, 19:43 IST
Last Updated 20 ಜನವರಿ 2017, 19:43 IST

ನವದೆಹಲಿ: ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ತಲಾ ಒಂಬತ್ತು ವರ್ಷ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ ತೀರ್ಪನ್ನು ಕ್ರೀಡಾಡಳಿತ ಗಾರರು ಸ್ವಾಗತಿಸಿದ್ದಾರೆ.

ನಿರಂಜನ್‌ ಷಾ, ಮಾಜಿ ಕ್ರಿಕೆಟಿಗ ದಿಲೀಪ್‌ ವೆಂಗಸರ್ಕಾರ್‌ ಮತ್ತು ತಮಿಳು ನಾಡು ಕ್ರಿಕೆಟ್‌ ಸಂಸ್ಥೆಯ ಹಿಂದಿನ ಕಾರ್ಯದರ್ಶಿ ಕಾಶಿ ವಿಶ್ವನಾಥ್ ಸೇರಿ ದಂತೆ ಹಲವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.

‘18 ವರ್ಷ ಕ್ರಿಕೆಟ್‌ ಆಡಳಿತದಲ್ಲಿ ಕಾರ್ಯ ನಿರ್ವಹಿಸಲು ಸಿಕ್ಕ ಅವಕಾಶ ಉತ್ತಮವಾದದ್ದು. ಮೊದಲಾದರೂ ನಾವು ಲೋಧಾ ಸಮಿತಿ ಶಿಫಾರಸು ಗಳನ್ನು ವಿರೋಧಿಸಿರಲಿಲ್ಲ. 70 ವರ್ಷ ಕ್ಕಿಂತಲೂ ಹೆಚ್ಚು ವಯಸ್ಸಾದವರು ಅಧಿ ಕಾರದಲ್ಲಿ ಇರುವಂತಿಲ್ಲ.

ಒಂದು ರಾಜ್ಯ  ಕ್ರಿಕೆಟ್ ಸಂಸ್ಥೆಯಿಂದ ಒಬ್ಬರಿಗಷ್ಟೇ ಮತದಾನದ ಹಕ್ಕು ಮತ್ತು ಮೂರು ವರ್ಷಗಳ ಅಧಿಕಾರದ ಬಳಿಕ ಮತ್ತೆ ಅಧಿಕಾರ ಪಡೆಯುವಂತಿಲ್ಲ ಎನ್ನುವ ಕೆಲ ಶಿಫಾರಸುಗಳ ಬಗ್ಗೆಯಷ್ಟೇ  ವಿರೋಧ ವಿತ್ತು. ನಾಗಾಲ್ಯಾಂಡ್ ಕ್ರಿಕೆಟ್ ಸಂಸ್ಥೆಯ ಮತದಾನದ ಹಕ್ಕು ನೀಡಲು ಹೇಗೆ ಸಾಧ್ಯ. ಅದೇ ರೀತಿ  41 ಬಾರಿ ರಣಜಿ ಚಾಂಪಿಯನ್‌ ಆದ ಮುಂಬೈ ಕ್ರಿಕೆಟ್ ಸಂಸ್ಥೆಗೆ ಮತದಾನದ ಹಕ್ಕು ನೀಡದೇ ಇರುವುದು ಹೇಗೆ ಸಾಧ್ಯ. ಆದ್ದರಿಂದ ನಮ್ಮ ವಿರೋಧವಿತ್ತು’ ಎಂದು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯಲ್ಲಿ ಪದಾಧಿಕಾರಿ ಯಾಗಿದ್ದ  ನಿರಂಜನ್‌ ಷಾ ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಖುಷಿಯಾಗಿದೆ. ಮತ್ತೆ ಅಧಿಕಾರ ಪಡೆ ಯಲು ಒಂದು ಅವಕಾಶ ಸಿಕ್ಕಿದೆ’ ಎಂದು ಡಿಡಿಸಿಎ ಹಿಂದಿನ ಉಪಾಧ್ಯಕ್ಷ ಚೇತನ್ ಚೌಹಾಣ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

‘ಬಿಸಿಸಿಐನಲ್ಲಿ ಕಾರ್ಯ ನಿರ್ವಹಿಸಲು ನನಗೆ ಒಂಬತ್ತು ವರ್ಷ ಕಾಲಾವಕಾಶ ಲಭಿಸಿದೆ. ಮೂರು ವರ್ಷಗಳ ಅವಧಿ ಮುಗಿದ ಬಳಿಕ ಮಂಡಳಿಯಲ್ಲಿ ಸ್ಥಾನ ಪಡೆಯಲು ವೇದಿಕೆ ಸಿಕ್ಕಿದೆ’ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಖಜಾಂಚಿ ಬಿಸ್ವರೂಪ್‌ ಡೇ ತಿಳಿಸಿದ್ದಾರೆ.

ಪರಿಗಣನೆ: ರೈಲ್ವೇಸ್‌, ಸರ್ವಿಸಸ್‌ ಮತ್ತು ವಿಶ್ವವಿದ್ಯಾಲಯಗಳ ಸಂಸ್ಥೆಗಳು ತಮಗೆ   ಬಿಸಿಸಿಐ ಕಾಯಂ ಮಾನ್ಯತೆ ಕೊಡಬೇಕು ಎಂದು ಮನವಿ ಮಾಡಿಕೊಂಡಿವೆ. ಇದನ್ನು ವಿಚಾರಣೆಗೆ ಪರಿಗಣಿಸುವು ದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.