ADVERTISEMENT

ಸೋಷಿಯಲ್‌ ಕ್ರಿಕೆಟರ್ಸ್‌ಗೆ ಗೆಲುವು

ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:48 IST
Last Updated 19 ಜನವರಿ 2017, 19:48 IST

ಬೆಂಗಳೂರು: ಕೆ.ಸಿ. ಕಾರ್ಯಪ್ಪ (ಔಟಾಗದೆ 62) ಮತ್ತು (20ಕ್ಕೆ2) ಅವರ ಆಲ್‌ರೌಂಡ್್ ಆಟದ ಬಲದಿಂದ ಸೋಷಿಯಲ್‌ ಕ್ರಿಕೆಟರ್ಸ್‌ ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸ್ಪಾರ್ಕ್‌ಲರ್ಸ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ 102ರನ್‌ಗಳ ಜಯಭೇರಿ ಮೊಳಗಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್್ ಮಾಡಿದ ಸೋಷಿಯಲ್‌ ಕ್ರಿಕೆಟರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185ರನ್‌ ಕಲೆಹಾಕಿತು. ಸವಾಲಿನ ಗುರಿ ಎದುರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸ್ಪಾರ್ಕ್‌ಲರ್ಸ್‌ ಕ್ಲಬ್‌ 9 ವಿಕೆಟ್‌ಗೆ 83ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಸೋಷಿಯಲ್‌ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 (ರಿತೇಶ್‌ ಭಟ್ಕಳ್‌ 69, ಕೆ.ಸಿ. ಕಾರ್ಯಪ್ಪ ಔಟಾಗದೆ 62). ಸ್ಪಾರ್ಕ್‌ಲರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 83 (ಕೆ.ಸಿ. ಕಾರ್ಯಪ್ಪ 20ಕ್ಕೆ2). ಫಲಿತಾಂಶ: ಸೋಷಿಯಲ್‌ ಕ್ರಿಕೆಟರ್ಸ್‌ಗೆ 102ರನ್‌ ಗೆಲುವು. ವಿಲ್ಸನ್‌ ಗಾರ್ಡನ್‌ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 145.

ADVERTISEMENT

ಜ್ಯುಪಿಟರ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 143. ಫಲಿತಾಂಶ: ವಿಲ್ಸನ್‌ ಗಾರ್ಡನ್‌ ತಂಡಕ್ಕೆ 2 ರನ್‌ ಜಯ.
ಬಿಇಎಲ್‌ ಕಾಲೊನಿ: 15.2 ಓವರ್‌ಗಳಲ್ಲಿ 84. ಬೆಂಗಳೂರು ಕ್ರಿಕೆಟರ್ಸ್‌: 11.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 85.ಫಲಿತಾಂಶ: ಬೆಂಗಳೂರು ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ಜಾಲಿ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134. ಬೆಂಗಳೂರು ಯುನೈಟೆಡ್‌: 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 135. ಫಲಿತಾಂಶ: ಬೆಂಗಳೂರು ಯುನೈಟೆಡ್‌ಗೆ 5 ವಿಕೆಟ್‌ ಜಯ. ಯಂಗ್‌ ಪಯೋನಿರ್‌: 19.3 ಓವರ್‌ಗಳಲ್ಲಿ 125.

ನೆಪ್ಚೂನ್‌ ಕ್ಲಬ್‌: 16.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 128. ಫಲಿತಾಂಶ: ನೆಪ್ಚೂನ್‌ ಕ್ಲಬ್‌ಗೆ 10 ವಿಕೆಟ್‌ ಗೆಲುವು. ವಿಶ್ವೇಶ್ವರಂ ಪುರಂ ಕ್ಲಬ್‌ (2): 20 ಓವರ್‌ಗಳಲ್ಲಿ 4 ವಿಕೆಟ್‌ಗೆ 164. ಸ್ವಸ್ತಿಕ್‌ ಯೂನಿಯನ್‌: 19.1 ಓವರ್‌ಗಳಲ್ಲಿ 151. ಫಲಿತಾಂಶ: ವಿಶ್ವೇಶ್ವರಂ ಪುರಂ ತಂಡಕ್ಕೆ 13ರನ್‌ ಗೆಲುವು. ದೂರ ವಾಣಿ ಕ್ರಿಕೆಟರ್ಸ್‌: 17.1 ಓವರ್‌ಗಳಲ್ಲಿ 78.

ಜವಾಹರ ಸ್ಪೋರ್ಟ್ಸ್‌ ಕ್ಲಬ್‌: 15.5 ಓವರ್‌ಗಳಲ್ಲಿ 4 ವಿಕೆಟ್‌ಗೆ 82. ಫಲಿತಾಂಶ: ಜವಾಹರ ಕ್ಲಬ್‌ಗೆ 6 ವಿಕೆಟ್‌ ಜಯ. ಹೊಸ ಕೋಟೆ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 106. ಫ್ರೆಂಡ್ಸ್‌ ಯೂನಿಯನ್‌: 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 107. ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ಗೆ 6 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.