ADVERTISEMENT

ಸ್ಕ್ವಾಷ್‌: ಪ್ರಶಸ್ತಿ ಗೆದ್ದ ಹರಿಂದರ್‌ ಸಂಧು

ಪಿಟಿಐ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ಭಾರತದ ಹರಿಂದರ್‌ ಪಾಲ್‌ ಸಂಧು ಆಟದ ವೈಖರಿ.
ಭಾರತದ ಹರಿಂದರ್‌ ಪಾಲ್‌ ಸಂಧು ಆಟದ ವೈಖರಿ.   

ಚೆನ್ನೈ: ಅಮೋಘ ಆಟವಾಡಿದ  ಭಾರತದ ಹರಿಂದರ್‌ ಪಾಲ್ ಸಂಧು ವಿಕ್ಟೋರಿಯನ್‌ ಓಪನ್ ಸ್ಕ್ವಾಷ್‌ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಅಗ್ರಶ್ರೇಯಾಂಕದ ಆಟಗಾರ ಆಸ್ಟ್ರೇಲಿಯಾದ ರೆಕ್ಸ್ ಹೆಡ್ರಿಕ್‌ ಅವರನ್ನು ಮಣಿಸಿದರು.

ಎರಡು ವಾರಗಳಲ್ಲಿ ಅವರು ಗಳಿಸಿದ ಎರಡನೇ ಪ್ರಶಸ್ತಿ ಇದು. ಕಳೆದ ವಾರ ಅವರು ದಕ್ಷಿಣ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಪ್ರಶಸ್ತಿ ಗೆದ್ದಿದ್ದರು.
ಮೆಲ್ಬರ್ನ್‌ನಲ್ಲಿ ಶನಿವಾರ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ನೆದರ್ಲೆಂಡ್ಸ್‌ನ ಪೆಡ್ರೊ ಶ್ವೀಟ್‌ಮನ್‌ ಅವರನ್ನು ಮಣಿಸಿದ್ದರು.

ಭಾನುವಾರದ ಪಂದ್ಯದಲ್ಲಿ 12–14, 11–3, 11–4, 11–7ರಲ್ಲಿ ಅವರು ಜಯ ಸಾಧಿಸಿದರು. ಟೂರ್ನಿಯುದ್ದಕ್ಕೂ ಒಂದೇ ಒಂದು ಗೇಮ್‌ ಬಿಟ್ಟುಕೊಡದೆ ಫೈನಲ್ ಪ್ರವೇಶಿಸಿದ್ದ ಸಂಧು 77 ನಿಮಿಷ ನಡೆದ ಪಂದ್ಯದಲ್ಲಿ ಪ್ರಬಲ ಎದುರಾಳಿಯನ್ನು ದಿಟ್ಟವಾಗಿ ಎದುರಿಸಿದರು.

ADVERTISEMENT

ಮೂರನೇ ಶ್ರೇಯಾಂಕದ ಭಾರತೀಯ ಆಟಗಾರನ ವಿರುದ್ಧ ಮೊದಲ ಗೇಮ್‌ನಲ್ಲಿ ಪಟ್ಟುಬಿಡದೆ ಆಡಿದ ಹೆಡ್ರಿಕ್‌ ಪ್ರಯಾಸದ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.