ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡಕ್ಕೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 8:18 IST
Last Updated 23 ಆಗಸ್ಟ್ 2018, 8:18 IST
ಕೆ. ಗೌತಮ್ (ಸಂಗ್ರಹ ಚಿತ್ರ).
ಕೆ. ಗೌತಮ್ (ಸಂಗ್ರಹ ಚಿತ್ರ).   

ಬೆಂಗಳೂರು: ಭಾರತ ‘ಎ; ತಂಡವು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ಎದುರು ಆರಂಭದಲ್ಲಿಯೇ ಆಘಾತ ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡವು ಮೊಹಮ್ಮದ್ ಸಿರಾಜ್ (88ಕ್ಕೆ4) ಮತ್ತು ಕೃಷ್ಣಪ್ಪ ಗೌತಮ್ (31ಕ್ಕೆ3) ಅವರ ಉತ್ತಮ ಬೌಲಿಂಗ್ ಎದುರು 31.4 ಓವರ್‌ಗಳಲ್ಲಿ 151 ರನ್‌ ಗಳಿಸಿ ಆಲೌಟ್ ಆಯಿತು.

ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ‘ಎ’ ತಂಡವು 17 ಓವರ್‌ಗಳಲ್ಲಿ 47 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೇಮ್ಸ್‌ ರಿಚರ್ಡ್ಸನ್‌ (14ಕ್ಕೆ3) ಚುರುಕಿನ ದಾಳಿ ನಡೆಸಿದರು. ಆರ್. ಸಮರ್ಥ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ‘ಎ’: 31.4 ಓವರ್‌ಗಳಲ್ಲಿ 151 (ಡಾರ್ಚಿ ಶಾರ್ಟ್ 16, ಉಸ್ಮಾನ್ ಖ್ವಾಜಾ 13, ಟ್ರಾವಿಸ್ ಹೆಡ್ 28, ಆಷ್ಟನ್ ಆಗರ್ 34, ನೇಸರ್ 16, ಎಂ.ಜೆ. ಸ್ವಾಪ್ಸನ್ 15, ಮೊಹಮ್ಮದ್ ಸಿರಾಜ್ 88ಕ್ಕೆ4, ದೀಪಕ್ ಚಹಾರ್ 33ಕ್ಕೆ1, ಕೆ. ಗೌತಮ್ 31ಕ್ಕೆ3, ಕೃಣಲ್ ಪಾಂಡ್ಯ 3ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.