ADVERTISEMENT

ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣ

ಪಿಟಿಐ
Published 18 ಏಪ್ರಿಲ್ 2024, 14:06 IST
Last Updated 18 ಏಪ್ರಿಲ್ 2024, 14:06 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಪಿಟಿಐ ಚಿತ್ರ

ಜೈಪುರ: ವಿಶ್ವ ಪಾರಂಪರಿಕ ದಿನದ ಅಂಗವಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆಯನ್ನು ಜೈಪುರದ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ.

ADVERTISEMENT

ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಿಸುವಂತೆ ಕಳೆದ ಒಂದು ವರ್ಷದಿಂದ ಪ್ರವಾಸಿಗರು, ವಿಶೇಷವಾಗಿ ಮಕ್ಕಳು ಮತ್ತು ಯುವಕರಿಂದ ಬಹಳ ಒತ್ತಾಯ ಕೇಳಿಬಂದಿದೆ ಎಂದು ಮ್ಯೂಸಿಯಂನ ಸಂಸ್ಥಾಪಕ ನಿರ್ದೇಶಕರಾದ ಅನೂಪ್ ಶ್ರೀವಾಸ್ತವ್ ಹೇಳಿದ್ದಾರೆ.

‘ಕೊಹ್ಲಿ ಪ್ರತಿಮೆ ಮ್ಯೂಸಿಯಂನಲ್ಲಿ ಇರಬೇಕೆಂದು ಅಭಿಮಾನಿಗಳ ಗಟ್ಟಿ ಅಭಿಪ್ರಾಯವಾಗಿತ್ತು. ವಿಶ್ವ ಪಾರಂಪರಿಕ ದಿನವಾದ ಇಂದು ಪ್ರತಿಮೆ ಅನಾವರಣಗೊಳಿಸಲಾಗಿದೆ’ಎಂದೂ ಅವರು ತಿಳಿಸಿದ್ದಾರೆ.

ನಗರ್‌ಗಢ ಕೋಟೆ ಪ್ರದೇಶದಲ್ಲಿರುವ ಮ್ಯೂಸಿಯಂನಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ 44 ಮೇಣದ ಪ್ರತಿಮೆಗಳಿವೆ.

ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆ 35 ಕೆ.ಜಿ ತೂಕವಿದ್ದು, 2 ತಿಂಗಳಿಂದ ನಿರ್ಮಿಸಲಾಗಿದೆ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಎಪಿಜೆ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಲ್ಪನಾ ಚಾವ್ಲಾ, ಅಮಿತಾಭ್ ಬಚ್ಚನ್ ಮತ್ತು ಮದರ್ ತೆರೇಸಾ ಅವರ ಮೇಣದ ಪ್ರತಿಮೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.