ADVERTISEMENT

ರಾಣಿ ರಾಂಪಾಲ್‌ಗೆ ಸಾರಥ್ಯ

ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡ

ಪಿಟಿಐ
Published 6 ಜುಲೈ 2018, 19:57 IST
Last Updated 6 ಜುಲೈ 2018, 19:57 IST
ಕೋಚ್‌ ಶೋರ್ಡ್‌ ಮ್ಯಾರಿಜ್‌ ಜೊತೆ ನಾಯಕಿ ರಾಣಿ ರಾಂಪಾಲ್‌
ಕೋಚ್‌ ಶೋರ್ಡ್‌ ಮ್ಯಾರಿಜ್‌ ಜೊತೆ ನಾಯಕಿ ರಾಣಿ ರಾಂಪಾಲ್‌   

ನವದೆಹಲಿ: ಮುಂಚೂಣಿ ವಿಭಾಗದ ಆಟಗಾರ್ತಿ ರಾಣಿ ರಾಂಪಾಲ್ ಅವರು ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ. ಹಾಕಿ ಇಂಡಿಯಾ (ಎಚ್‌ಐ) ಶುಕ್ರವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.

ರಾಣಿ ಅವರು 200ಕ್ಕೂ ಅಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡ ಹೋದ ವರ್ಷ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.

ಅನುಭವಿ ಗೋಲ್‌ಕೀಪರ್‌ ಸವಿತಾ ಅವರು ಕೂಟದಲ್ಲಿ ಉ‍ಪ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

ADVERTISEMENT

ಈ ಬಾರಿಯ ಕಾಮನ್‌ವೆಲ್ತ್‌ ಕೂಟ ಆಗಸ್ಟ್‌ 18ರಿಂದ ಸೆಪ್ಟೆಂಬರ್‌ 2ರವರೆಗೆ ಇಂಡೊನೇಷ್ಯಾದಲ್ಲಿ ನಡೆಯಲಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಸವಿತಾ (ಉಪ ನಾಯಕಿ) ಮತ್ತು ರಜನಿ ಎತಿಮರ್ಪು. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ದೀಪಿಕಾ, ಗುರ್ಜಿತ್‌ ಕೌರ್‌ ಮತ್ತು ರೀನಾ ಕೊಖರ್‌.ಮಿಡ್‌ಫೀಲ್ಡರ್ಸ್‌: ನಮಿತಾ ಟೊಪ್ಪೊ, ಲಿಲಿಮಾ ಮಿಂಜ್‌, ಮೋನಿಕಾ, ಉದಿತಾ, ನಿಕ್ಕಿ ಪ್ರಧಾನ್‌ ಮತ್ತು ನೇಹಾ ಗೋಯಲ್‌. ಫಾರ್ವರ್ಡ್ಸ್‌: ರಾಣಿ ರಾಂಪಾಲ್‌ (ನಾಯಕಿ), ವಂದನಾ ಕಟಾರಿಯಾ, ಲಾಲ್ರೆಮ್‌ಸಿಯಾಮಿ, ನವನೀತ್‌ ಕೌರ್‌ ಮತ್ತು ನವಜೋತ್‌ ಕೌರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.