ADVERTISEMENT

ಕ್ಲೌಡ್‌ ಸ್ಟೋರೇಜ್‌ನಿಂದ ಶೇರ್‌ ಮಾಡಿ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 5 ಏಪ್ರಿಲ್ 2017, 19:30 IST
Last Updated 5 ಏಪ್ರಿಲ್ 2017, 19:30 IST
ಕ್ಲೌಡ್‌ ಸ್ಟೋರೇಜ್‌ನಿಂದ ಶೇರ್‌ ಮಾಡಿ
ಕ್ಲೌಡ್‌ ಸ್ಟೋರೇಜ್‌ನಿಂದ ಶೇರ್‌ ಮಾಡಿ   
ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಈ ಕಾಲದಲ್ಲಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಜಾಣತನ. ತಂತ್ರಜ್ಞಾನದ ನೆರವಿನಿಂದ ನಾವು ನಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಹೆಚ್ಚಿನ ತರಬೇತಿಯೇನೂ ಬೇಕಾಗಿಲ್ಲ, ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಸ್ವಲ್ಪ ಆಸಕ್ತಿ ಇದ್ದರೆ ಸಾಕು. 
 
ನಮ್ಮ ಬಳಿಯಲ್ಲಿರುವ ಫೋಟೊ, ವಿಡಿಯೊ, ಆಡಿಯೊ, ಪಿಡಿಎಫ್‌, ಡಾಕ್ಯುಮೆಂಟ್‌ ಎಕ್ಸ್‌ಎಲ್‌ ಫೈಲ್‌ಗಳನ್ನು ನಾವು ಯಾರೊಂದಿಗಾದರೂ ಹಂಚಿಕೊಳ್ಳಬೇಕಿದ್ದರೆ ಅದನ್ನು ಮೇಲ್‌ ಮೂಲಕ ಕಳಿಸುವುದು ರೂಢಿ.

ಕೆಲವು ಎಂ.ಬಿ.ಗಳಷ್ಟಿರುವ ಫೈಲ್‌ಗಳನ್ನು ನೇರವಾಗಿ ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸಬಹುದು. ಆದರೆ, ಹೆಚ್ಚಿನ ಗಾತ್ರದ ಫೈಲ್‌ಗಳನ್ನು ಮೇಲ್‌ ಮೂಲಕ ಕಳಿಸುವುದು ತುಸು ಕಿರಿಕಿರಿಯ ಕೆಲಸ. ಏಕೆಂದರೆ ಹೆಚ್ಚು ಗಾತ್ರವಿರುವ ಫೈಲ್‌ಗಳು ಮೇಲ್‌ಗೆ ಅಟ್ಯಾಚ್‌ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ.
 
ನೀವು ನಿಮ್ಮ ಡಿವೈಸ್‌ಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ಸಿಂಕ್‌ ಮಾಡಿದ್ದರೆ ನಿಮ್ಮ ಬಹುತೇಕ ಫೈಲ್‌ಗಳು ಅಲ್ಲಿ ಸೇವ್‌ ಆಗಿರುತ್ತವೆ. ಇವೇ ಫೈಲ್‌ಗಳನ್ನು ಮತ್ತೆ ನೀವು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ.

ಏಕೆಂದರೆ ಈಗಾಗಲೇ ಅಪ್‌ಲೋಡ್‌ ಆಗಿರುವ ಫೈಲ್‌ಗಳನ್ನು ಮತ್ತೆ ಮೇಲ್‌ಗೆ ಅಪ್‌ಲೋಡ್ ಮಾಡುವುದು ಎರಡೆರಡು ಕೆಲಸ ಮಾಡಿದಂತೆ. ಹೀಗಾಗಿ ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ನೀವು ಮೇಲ್‌ ಮೂಲಕ ಹಂಚಿಕೊಂಡರೆ ಸಾಕು.
 
ಗೂಗಲ್‌ ಡ್ರೈವ್‌, ಯಾಹೂ ಡ್ರೈವ್‌, ಮೈಕ್ರೊಸಾಫ್ಟ್‌ನ ಒನ್‌ಡ್ರೈವ್‌ನ ಕ್ಲೌಡ್‌ ಸ್ಟೋರೇಜ್‌ನಲ್ಲಿ ಸೇವ್‌ ಆಗಿರುವ ನಿಮ್ಮ ಫೈಲ್‌ಗಳನ್ನು ಮತ್ತೆ ನೀವು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ.

ನಿಮ್ಮ ಡ್ರೈವ್‌ನಲ್ಲಿರುವ ಈ ಫೈಲ್‌ಗಳ ಲಿಂಕ್‌ ಅನ್ನು ನೀವು ಕಳಿಸಬೇಕೆಂದಿರುವವರೊಂದಿಗೆ ಹಂಚಿಕೊಂಡರೆ ಸಾಕು. ಈ ಲಿಂಕ್ ಕ್ಷಣಮಾತ್ರದಲ್ಲಿ ಅವರಿಗೆ ಸೆಂಡ್‌ ಆಗುತ್ತದೆ.
 
ಡ್ರೈವ್‌ನಲ್ಲಿರುವ ಫೈಲ್‌ನ ಲಿಂಕ್‌ ಶೇರ್‌ ಮಾಡುವ ವೇಳೆ ನೀವು ಕಳಿಸುವವರಿಗೆ ಅದನ್ನು ಅಕ್ಸೆಸ್‌ ಮಾಡುವ ಪರ್ಮಿಷನ್‌ ಕೇಳುತ್ತದೆ. ಇಲ್ಲಿ ನೀವು ಪರ್ಮಿಷನ್‌ಗೆ ಓಕೆ ಒತ್ತಿದರೆ ಆಯಿತು. ನೀವು ಕಳಿಸಿದ ಫೈಲ್‌ನ ಲಿಂಕ್‌ ಅನ್ನು ನಿಮ್ಮವರು ಅಕ್ಸೆಸ್‌ ಮಾಡಬಹುದು.

ಮೇಲ್‌ ಮೂಲಕ ಅಟ್ಯಾಚ್‌ ಮಾಡಿ ಫೈಲ್‌ ಕಳಿಸುವ ಬದಲಿಗೆ ನಿಮ್ಮ ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ಶೇರ್‌ ಮಾಡಿ ಸಮಯ ಉಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.