ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಅಕ್ಷರ ದಪ್ಪ ಮಾಡುವುದು ಹೇಗೆ?

ದಯಾನಂದ ಎಚ್‌.ಎಚ್‌.
Published 25 ಮೇ 2017, 16:17 IST
Last Updated 25 ಮೇ 2017, 16:17 IST
ವಾಟ್ಸ್‌ಆ್ಯಪ್‌ನಲ್ಲಿ ಅಕ್ಷರ ದಪ್ಪ ಮಾಡುವುದು ಹೇಗೆ?
ವಾಟ್ಸ್‌ಆ್ಯಪ್‌ನಲ್ಲಿ ಅಕ್ಷರ ದಪ್ಪ ಮಾಡುವುದು ಹೇಗೆ?   

ಅಂತರ್ಜಾಲದ ಲಭ್ಯತೆ ಹೆಚ್ಚಾದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಗುತ್ತಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳನ್ನು ಬಳಸದವರು ಈಗ ವಿರಳ. ಅನಿಸಿದ್ದನ್ನು ಹೇಳಲು ಫೇಸ್‌ಬುಕ್‌, ಚಾಟ್‌ ಮಾಡಲು ವಾಟ್ಸ್‌ಆ್ಯಪ್‌ ಈಗ ಮಾಮೂಲು.

ಚಿತ್ರಗಳು, ವಿಡಿಯೊ ಫೈಲ್‌, ಪಿಡಿಎಫ್‌ ಡಾಕ್ಯುಮೆಂಟ್‌ ಸೇರಿದಂತೆ ಹಲವು ಫೈಲ್‌ಗಳನ್ನು ಕಳಿಸಲು ವಾಟ್ಸ್‌ಆ್ಯಪ್‌ ಸಹಕಾರಿ. ಹೀಗಾಗಿ ವಾಟ್ಸ್‌ಆ್ಯಪ್‌ ಕೇವಲ ಚಾಟಿಂಗ್ ಅಥವಾ ಜೋಕ್‌ಗಳನ್ನು ಫಾರ್ವರ್ಡ್‌ ಮಾಡುವ ಆ್ಯಪ್‌ ಆಗಿ ಉಳಿದಿಲ್ಲ. ಇಮೇಲ್‌ ಬಿಟ್ಟರೆ ಸದ್ಯದ ಜನಪ್ರಿಯ ಸಂವಹನ ಮಾರ್ಗವೆಂದರೆ ಅದು ವಾಟ್ಸ್‌ಆ್ಯಪ್‌.

ವಾಟ್ಸ್‌ಆ್ಯಪ್‌ ಕೂಡ ದಿನದಿನಕ್ಕೆ ಅಪ್‌ಗ್ರೇಡ್‌ ಆಗುತ್ತಿದೆ. ಹೀಗೆ ಅಪ್‌ಗ್ರೇಡ್‌ ಆದ ವಾಟ್ಸ್‌ಆ್ಯಪ್‌ ಜತೆಗೆ ಅದರ ಬಳಕೆದಾರರೂ ಅಪ್‌ಡೇಟ್‌ ಆಗುತ್ತಿರಬೇಕಾದ್ದು ಅಗತ್ಯ. ವಾಟ್ಸ್‌ಆ್ಯಪ್‌ನಲ್ಲಿನ ಬಹುತೇಕ ಆಯ್ಕೆಗಳು ಅದನ್ನು ಬಳಸುವವರಿಗೆಲ್ಲಾ ಗೊತ್ತೇ ಇರುತ್ತವೆ. ಆದರೆ, ಕೆಲವು ಸಣ್ಣ ಸಂಗತಿಗಳು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅಂಥ ಒಂದು ಸಣ್ಣ ಸಂಗತಿ ವಾಟ್ಸ್‌ಆ್ಯಪ್‌ನಲ್ಲಿ ಟೆಕ್ಸ್ಟ್ ಬೋಲ್ಡ್‌ (ಅಕ್ಷರ ದಪ್ಪ) ಮಾಡುವುದು.

ADVERTISEMENT

ವಾಟ್ಸ್‌ಆ್ಯಪ್‌ ಬಳಸುವ ಬಹುತೇಕರಿಗೆ ಈ ಬಗ್ಗೆ ಗೊತ್ತಿರಬಹುದು, ಅನೇಕರಿಗೆ ಗೊತ್ತಿಲ್ಲದೆಯೂ ಇರಬಹುದು. ವಾಟ್ಸ್‌ಆ್ಯಪ್‌ನಲ್ಲಿ ಅಕ್ಷರಗಳನ್ನು ದಪ್ಪ ಮಾಡುವುದು ತುಂಬಾ ಸುಲಭ. ಯಾವುದೇ ಭಾಷೆಯ ಅಕ್ಷರಗಳನ್ನು ಬೋಲ್ಡ್‌ ಮಾಡಲು ಎರಡು ಸ್ಟಾರ್‌ಗಳಿದ್ದರೆ ಸಾಕು! ಬರಹದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಸ್ಟಾರ್‌ ಸೇರಿಸಿದರೆ ಸ್ಟಾರ್‌ಗಳ ನಡುವಿರುವ ಎಲ್ಲಾ ಅಕ್ಷರಗಳೂ ಬೋಲ್ಡ್ ಆಗುತ್ತವೆ.

ಉದಾಹರಣೆಗೆ ‘ಪ್ರಜಾವಾಣಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಬೇಕಿದ್ದರೆ ಮೊದಲು * ಟೈಪ್‌ ಮಾಡಿ ಬಳಿಕ ಸ್ಪೇಸ್‌ ಕೊಡದೆ ‘ಪ್ರಜಾವಾಣಿ’ ಎಂದು ಟೈಪ್‌ ಮಾಡಿ ಕೊನೆಗೆ ಮತ್ತೆ ಸ್ಪೇಸ್‌ ಕೊಡದೆ * ಟೈಪ್‌ ಮಾಡಿ. ಈಗ ನೀವು ಟೈಪಿಸಿದ ಅಕ್ಷರಗಳೆಲ್ಲವೂ ಬೋಲ್ಡ್‌ ಆಗಿರುತ್ತವೆ. ಇದೇ ರೀತಿ ವಾಕ್ಯಗಳನ್ನೂ ಬೋಲ್ಡ್‌ ಮಾಡಬಹುದು. ವಾಕ್ಯದ ಮೊದಲಲ್ಲಿ ಮತ್ತು ಕೊನೆಗೆ ಸ್ಟಾರ್‌ ಸೇರಿಸಿದರೆ ಇಡೀ ವಾಕ್ಯ ಬೋಲ್ಡ್‌ ಆಗುತ್ತದೆ. ಇದುವರೆಗೂ ನೀವು ಅಕ್ಷರ ದಪ್ಪ ಮಾಡಿಲ್ಲವಾದರೆ ಒಮ್ಮೆ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.