ADVERTISEMENT

ಶೀಘ್ರದಲ್ಲೇ ಗೂಗಲ್‌ನ ಹೊಸ ‘ಮೀನು’ಗಳು!

ಪೃಥ್ವಿರಾಜ್ ಎಂ ಎಚ್
Published 2 ಮೇ 2017, 19:30 IST
Last Updated 2 ಮೇ 2017, 19:30 IST
ಶೀಘ್ರದಲ್ಲೇ ಗೂಗಲ್‌ನ ಹೊಸ ‘ಮೀನು’ಗಳು!
ಶೀಘ್ರದಲ್ಲೇ ಗೂಗಲ್‌ನ ಹೊಸ ‘ಮೀನು’ಗಳು!   

2016ರಲ್ಲಿ ಪಿಕ್ಸಲ್ ಮತ್ತು ಪಿಕ್ಸಲ್‌ ಎಕ್ಸ್ಎಲ್‌ ಎಂಬ ಎರಡು ವಿಭಿನ್ನ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಗೂಗಲ್‌ ಸಂಸ್ಥೆ ಈ ವರ್ಷ ಮೂರು ಹೊಸ ಮೊಬೈಲ್‌ಗಳನ್ನು ಪರಿಚಯಿಸಲು ಮಾಡಲು ಸಿದ್ಧತೆ ನಡೆಸಿದೆ.

ಅಕ್ಟೋಬರ್‌ ವೇಳೆಗೆ ಈ ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿವೆ. ಗೂಗಲ್ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಮೀನುಗಳ ಹೆಸರನ್ನು ಸಂಕೇತ ನಾಮವಾಗಿ ಇಡುತ್ತಿದೆ. ಹೊಸದಾಗಿ ಬರಲಿರುವ ಪಿಕ್ಸಲ್ 2 ಸಿರೀಸ್‌ನ ಫೋನ್‌ಗಳಿಗೆ ವಾಲ್‌ಐ (ಪಿಕ್ಸಲ್‌ 2), ಮುಸ್ಕಿ (ಪಿಕ್ಸಲ್ 2 ಎಕ್ಸ್‌ಎಲ್), ಟೈಮೆನ್ (ಕ್ರೋಮ್‌ ಬುಕ್‌ ಪಿಕ್ಸಲ್‌ 3) ಎಂಬ ಹೆಸರುಗಳನ್ನು ಇಟ್ಟಿದೆ. 

ಹಿಂದೆ ಬಿಡುಗಡೆ ಮಾಡಿದ್ದ ನೆಕ್ಸಸ್‌ 4ಗೆ ಮಾಕೊ, ನೆಕ್ಸಸ್‌ 5ಗೆ ಹ್ಯಾಮರ್‌ ಹೆಡ್, ನೆಕ್ಸ್ 6ಗೆ ಷಾಮು, ನೆಕ್ಸಸ್‌5ಎಕ್ಸ್‌ಗೆ ಬುಲ್‌ಹೆಡ್‌, ನೆಕ್ಸ್‌ 6ಪಿಗೆ ಯಾಂಗ್ಲರ್ ಎಂದು ಹೆಸರುಗಳನ್ನಿಟ್ಟಿತ್ತು. ಹೊಸ ಮೊಬೈಲ್‌ಗಳ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ADVERTISEMENT

* ಗೂಗಲ್‌ ಪರಿಚಯಿಸಲಿರುವ ಎರಡನೇ ಪೀಳಿಗೆಯ ಪಿಕ್ಸಲ್‌–2 ಮೊಬೈಲ್‌ನಲ್ಲಿ ಪೂರ್ಣ ಪ್ರಮಾಣದ ವಾಟರ್‌ಫ್ರೂಪ್‌ ತಂತ್ರಜ್ಞಾನ ಇರಲಿದೆ.  ಈಗಾಗಲೇ ಇಂತಹ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳಿಗೆ ಹೋಲಿಸಿದರೆ ಪಿಕ್ಸಲ್–2 ಮೊಬೈಲ್‌ಗಳು ಹೆಚ್ಚು ಹೊತ್ತು ನೀರಿನಲ್ಲಿದ್ದರೂ ಹಾಳಾಗುವ ಸಂಭವ ಕಡಿಮೆ.

* ಸ್ಯಾಮ್ಸಂಗ್ ಗೆಲಾಕ್ಸಿ 8 ಮೊಬೈಲ್‌ನಲ್ಲಿರುವ ಕರ್ವಡ್‌ ಡಿಸ್ಪ್ಲೇ, ಹೊಸ ಪಿಕ್ಸಲ್‌–2 ಮೊಬೈಲ್‌ನಲ್ಲೂ ಇರಲಿದೆ. ಅಲ್ಲದೆ ಟಚ್‌ಸ್ಕ್ರೀನ್ ಫ್ಲೆಕ್ಸಿಬಲ್ ಒಎಲ್‌ಇಡಿ ಡಿಸ್‌ಪ್ಲೇ ತಂತ್ರಜ್ಞಾನ ಇರಲಿದೆ.

* ಹಿಂದಿನ ಗೂಗಲ್ ಪಿಕ್ಸಲ್‌ ಮತ್ತು ಪಿಕ್ಸಲ್‌ ಎಕ್ಸ್‌ಎಲ್‌ ಮೊಬೈಲ್‌ಗಳಲ್ಲಿ ಸ್ಟಿರಿಯೋ ಸ್ಪೀಕರ್‌ಗಳು ಇರಲಿಲ್ಲ. ಹೊಸ ಮೊಬೈಲ್‌ನಲ್ಲಿ ಈ ಸೌಲಭ್ಯಗಳು ಇರಲಿವೆ. ಇದರಿಂದ ಶಬ್ದ ಗುಣಮಟ್ಟದ ಜತೆಗೆ ದೃಶ್ಯಗಳನ್ನು ನೋಡುವಾಗ ವಿಶೇಷ ಅನುಭವ ದೊರೆಯಲಿದೆ.

* ಪಿಕ್ಸೆಲ್‌–2 ಮೊಬೈಲ್‌ನ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 2Xರಷ್ಟು ಜೂಮ್‌ ಮಾಡಿದರೂ ಚಿತ್ರದ ಗುಣಮಟ್ಟಕ್ಕೆ ತೊಂದರೆಯಾಗುವುದಿಲ್ಲ. ಅಲ್ಲದೆ ಚಿತ್ರದ ಬ್ಯಾಕ್‌ಗ್ರೌಂಡ್‌ ಬ್ಲರ್‌ ಮಾಡಿಕೊಳ್ಳುವುದು ಮತ್ತಷ್ಟು ಸುಲಭ.

* ಪಿಕ್ಸಲ್‌ನ ಮೊದಲ ಪೀಳಿಗೆಯ ಮೊಬೈಲ್‌ಗಳಲ್ಲಿ ಮೈಕ್ರೊಫೋನ್‌, ಇಮೇಜ್ ಡಿಸ್ಟೋರ್ಷನ್, ಲೆನ್ಸ್ ಫ್ಲೇರ್ ಸಮಸ್ಯೆಯಿತ್ತು.  ಹೊಸ ಮೊಬೈಲ್‌ನಲ್ಲಿ ಈ ಸಮಸ್ಯೆಗಳು ಕಾಡದಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

* ಪಿಕ್ಸಲ್‌ ಹೊಸ ಮೊಬೈಲ್‌ಗಳಲ್ಲಿ ನೂತನ ನಿರ್ವಹಣಾ ತಂತ್ರಾಂಶವಾದ ‘ನೊಗಟ್‌’ ಅಳವಡಿಸಲಾಗಿದೆ.

* ಮೊದಲ ಪೀಳಿಗೆ ಪಿಕ್ಸಲ್ ಮೊಬೈಲ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 821 ಪ್ರೊಸೆಸರ್ ಇತ್ತು. ಹೊಸ ಪಿಕ್ಸಲ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್ ಇರಲಿದೆ. ಆ್ಯಪಲ್‌ನ ಹೊಸ ಮೊಬೈಲ್‌ಗಳ ರೀತಿ ಹೆಡ್‌ಫೋನ್‌ ಆಪ್ಷನ್ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.