ADVERTISEMENT

ಪತ್ರಾ ಚಾಳ್‌: ಸಂಜಯ್‌ ರಾವುತ್‌ ಆಪ್ತರ ಆಸ್ತಿ ಜಪ್ತಿ

ಪಿಟಿಐ
Published 24 ಏಪ್ರಿಲ್ 2024, 15:14 IST
Last Updated 24 ಏಪ್ರಿಲ್ 2024, 15:14 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ನವದೆಹಲಿ: ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್‌ ಅವರ ಆಪ್ತ ಪ್ರವೀಣ್‌ ರಾವುತ್‌ ಮತ್ತಿತರರಿಗೆ ಸಂಬಂಧಿಸಿದ ₹73.62 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.

ಮುಂಬೈನ ಪಾತ್ರಾ ಚಾಲ್ ನವೀಕರಣದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಈ ಕ್ರಮ ಕೈಗೊಂಡಿದೆ.

ಪಾಲ್ಘರ್‌, ದಾಪೋಲಿ, ರಾಯಗಢ ಮತ್ತು ಠಾಣೆಯಲ್ಲಿದ್ದ ಪ್ರವೀಣ್ ಮತ್ತು ಅವರ ಸಂಬಂಧಿಕರ ಸ್ಥಿರಾಸ್ತಿಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ ಹೇಳಿಕೆ ಮೂಲಕ ತಿಳಿಸಿದೆ.

ADVERTISEMENT

ಪ್ರಕರಣದಲ್ಲಿ ಸಂಜಯ್‌ ರಾವುತ್‌ ಮತ್ತು ಪ್ರವೀಣ್ ರಾವುತ್‌ ಅವರನ್ನು ಇ.ಡಿ ಬಂಧಿಸಿದ್ದು, ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.