ADVERTISEMENT

ಅ.17ರಿಂದ 10 ದಿನ ಪ್ರಜಾವಾಣಿ 'ಆನ್‌ಲೈನ್ ದಸರಾ ಸಂಗೀತೋತ್ಸವ'

ಮಾಧ್ಯಮ ಜಗತ್ತಿನಲ್ಲೇ ವಿನೂತನ ಕಾರ್ಯಕ್ರಮ | ಆಯುಧ ಪೂಜೆ, ವಿಜಯ ದಶಮಿ ದಿನದಂದು ಡಬಲ್ ಧಮಾಕಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 9:34 IST
Last Updated 16 ಅಕ್ಟೋಬರ್ 2020, 9:34 IST
ಡಾ.ಪ್ರತಿಭಾ ಪ್ರಹ್ಲಾದ್ ನೇತೃತ್ವದಲ್ಲಿ ಜಯ ದುರ್ಗೆ: ವಿಶೇಷ ನೃತ್ಯ ಕಾರ್ಯಕ್ರಮ
ಡಾ.ಪ್ರತಿಭಾ ಪ್ರಹ್ಲಾದ್ ನೇತೃತ್ವದಲ್ಲಿ ಜಯ ದುರ್ಗೆ: ವಿಶೇಷ ನೃತ್ಯ ಕಾರ್ಯಕ್ರಮ   
""
""
""

ಕೋವಿಡ್ ಸಂಕಟದ ಈ ಕಾಲದಲ್ಲಿ ನಾಡ ಹಬ್ಬ ದಸರಾ ಸರಳ ಆಚರಣೆಯ ಅನಿವಾರ್ಯತೆಯಲ್ಲಿ ಸಿಲುಕಿದೆ. ಆರು ತಿಂಗಳಿಂದ ಒಂದಿಲ್ಲೊಂದು ರೀತಿಯಲ್ಲಿ ನಲುಗಿ ಹೋದ ಮನಸ್ಸುಗಳಿಗೆ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳ ಮೂಲಕ ಸಾಂತ್ವನ ನೀಡುವ ಪ್ರಯತ್ನ ಮಾಡಿದ್ದ ಪ್ರಜಾವಾಣಿ, ದಸರಾ ಹಬ್ಬದಲ್ಲಿ 'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಿದೆ.

ಈಗಾಗಲೇ ಪಾಡ್‌ಕಾಸ್ಟ್, ವಿಶೇಷ ವಿಡಿಯೊಗಳು, ಪಿವಿ ವೆಬ್ ಎಕ್ಸ್‌ಕ್ಲೂಸಿವ್ ಸರಣಿಗಳೇ ಮುಂತಾದಹಲವು 'ಪ್ರಥಮ'ಗಳಿಂದ ಜನಮನ ಸೆಳೆದಿರುವ ನಾಡಿನ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯ ಡಿಜಿಟಲ್ ವಿಭಾಗವು, ಈ ದಸರಾ ಸಂದರ್ಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 'ಆನ್‌ಲೈನ್ ದಸರಾ ಸಂಗೀತೋತ್ಸವ' ಆಯೋಜಿಸುತ್ತಿದೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಸಂಘಟನೆಯಲ್ಲಿ ಕನ್ನಡದ ಹೆಮ್ಮೆಯ, ಪ್ರಸಿದ್ಧ ಕಲಾವಿದರ ಸಹಯೋಗದಲ್ಲಿ ಹತ್ತು ದಿನಗಳ ಪರ್ಯಂತವಾಗಿ ಪ್ರಜಾವಾಣಿಯ ಫೇಸ್‌ಬುಕ್ ಪುಟವು ಓದುಗರ ಸಂಜೆಗಳನ್ನು ಸುಂದರವಾಗಿಸಲಿದೆ.

ಅ.17ರಿಂದ ಅ.26ರವರೆಗೆ ಸಂಜೆ 6 ಗಂಟೆಗೆ Fb.com/Prajavani.net ಇಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ADVERTISEMENT
ಪಂ. ರಾಜೀವ್ ತಾರಾನಾಥ್, ಪ್ರವೀಣ ಗೋಡಖಿಂಡಿ-ಷಡಜ್ ಗೋಡಖಿಂಡಿ, ಡಾ.ಪ್ರತಿಭಾ ಪ್ರಹ್ಲಾದ್, ಡಾ.ಪ್ರಕಾಶ್ ಸೊಂಟಕ್ಕೆ, ಕೃಪಾ ಫಡ್ಕೆ
2ನೇ ಸಾಲಿನಲ್ಲಿ: ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ, ಪಂಡಿತ್ ನರಸಿಂಹಲು ವಡವಾಟ್ಟಿ, ಉಸ್ತಾದ್ ಹಫೀಜ್ ಬಾಲೇ ಖಾನ್,
ವಿದ್ವಾನ್ ಶ್ರೀಧರ್ ಸಾಗರ, ಡಾ.ಸುಮಾ ಸುಧೀಂದ್ರ, ಪ್ರೊ.ಕೆ.ಈ.ರಾಧಾಕೃಷ್ಣ ಹಾಗೂ ಕೃಪಾ ಫಡ್ಕೆ ಅವರ ನೃತ್ಯ ತಂಡ

ನೊಂದ ಮನಸುಗಳಿಗೆ ಮನರಂಜನೆಯ ಸಾಂತ್ವನ ನೀಡುವ ಕಾರ್ಯಕ್ರಮಗಳು ಇಂತಿವೆ:
ಶನಿವಾರ 17ನೇ ಅಕ್ಟೋಬರ್
ದಸರಾ ಸಂಗೀತೋತ್ಸವ ಉದ್ಘಾಟನೆ
ಸಂಜೆ 6 ಗಂಟೆಗೆ: 88ನೇ ಜನ್ಮದಿನೋತ್ಸವ ಆಚರಿಸುವ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಗೌರವ ಸಮರ್ಪಣೆ

ಸಂಜೆ 6.45ರಿಂದ: ಮೈಸೂರಿನ ಸಂಗೀತ ಸುಧೆಯನ್ನು ಜಗತ್ತಿಗೇ ಹರಡಿರುವ ಯುಗಳ ಪಿಟೀಲು ವಾದನ: ಡಾ.ಮೈಸೂರು ಮಂಜುನಾಥ್ ಮತ್ತು ವಿದ್ವಾನ್ ಸುಮಂತ್ ಮಂಜುನಾಥ್ ಅವರಿಂದ.ಮೃದಂಗ: ತುಮಕೂರು ಬಿ.ರವಿಶಂಕರ್..

ಭಾನುವಾರ 18ನೇ ಅಕ್ಟೋಬರ್
57ನೇ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ತಂಡದ ಸದಸ್ಯ ಡಾ.ಪ್ರಕಾಶ್ ಸೊಂಟಕ್ಕೆ ಅವರಿಂದ ಎಲೆಕ್ಟ್ರಾನಿಕ್ ಗಿಟಾರ್ ವಾದನ

ಸೋಮವಾರ 19ನೇ ಅಕ್ಟೋಬರ್
ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ.ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ

ಮಂಗಳವಾರ 20ನೇ ಅಕ್ಟೋಬರ್
ತಂದೆ-ಮಗನ ವೇಣುವಾದನ ವೈವಿಧ್ಯ: ಪಂಡಿತ್ ಪ್ರವೀಣ್ ಗೋಡಖಿಂಡಿ, ಚಿರಂಜೀವಿ ಷಡಜ್ ಗೋಡಖಿಂಡಿ ಅವರಿಂದ ಯುಗಳ ವೇಣು ವಾದನ, ತಬಲಾ: ಪಂಡಿತ್ ಕಿರಣ್ ಗೋಡಖಿಂಡಿ

ಬುಧವಾರ 21ನೇ ಅಕ್ಟೋಬರ್
ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ಅವರಿಗೆ ಶಿಷ್ಯನಿಂದ ನಮನ
ವಿದ್ವಾನ್ ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸೋಫೋನ್ ವಾದನ

ಗುರುವಾರ 22ನೇ ಅಕ್ಟೋಬರ್
ಹಳ್ಳಿಯಲ್ಲಿ ಜನಿಸಿ ಅಂತರರಾಷ್ಟ್ರೀಯ ಕ್ಲಾರಿಯೋನೆಟ್ ಸಮ್ಮೇಳನದ ಅಧ್ಯಕ್ಷತೆಗೇರಿದ ಪಂಡಿತ್ ನರಸಿಂಹಲು ವಡವಾಟ್ಟಿ ಅವರಿಂದ ಕ್ಲಾರಿಯೋನೆಟ್ ವಾದನ
ಸಹ ವಾದನ: ವೆಂಕಟೇಶ್ ಗುಡಿಬಂಡೆ
ತಬಲ: ಸುದರ್ಶನ್ ಹಸ್ಕಿಹಾಳ್

ಶುಕ್ರವಾರ 23ನೇ ಅಕ್ಟೋಬರ್
ಅಮೆರಿಕನ್ನಡಿಗರು ಮೆಚ್ಚಿದ ದಾಸವಾಣಿ ಗಾಯಕರಾದ ಉಸ್ತಾದ್ ಹಫೀಜ್ ಬಾಲೇ ಖಾನ್ ಅವರಿಂದ ದಾಸ ವಾಣಿ ಕಾರ್ಯಕ್ರಮ

ಶನಿವಾರ 24ನೇ ಅಕ್ಟೋಬರ್
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ, ಪರಮ ಗುರು ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ಅವರ ಲಯ ಲಹರಿ ತಂಡದವರಿಂದ ಲಯ ತರಂಗ ಕಾರ್ಯಕ್ರಮ

ಭಾನುವಾರ 25ನೇ ಅಕ್ಟೋಬರ್ 2020
ಸಂಜೆ 5.30ರಿಂದ, ಆಯುಧ ಪೂಜೆ ವಿಶೇಷ ಯಕ್ಷಗಾನ ತಾಳಮದ್ದಳೆ. ಪ್ರಸಂಗ: ರಾವಣ ಮೋಕ್ಷ
ಭಾಗವತರು: ವಿಷ್ಣು ಕಲ್ಲೂರಾಯ, ಮದ್ದಳೆ: ಅಮೋಘ ಕುಂಟಿನಿ, ಚೆಂಡೆ: ಅವಿನಾಶ್ ಬೈಪಾಡಿತ್ತಾಯ
ಮುಮ್ಮೇಳ: ಪ್ರೊ. ಕೆ.ಈ. ರಾಧಾಕೃಷ್ಣ, ಸುಧನ್ವ ದೇರಾಜೆ, ಡಾ. ಬಾಲಕೃಷ್ಣ ಶೆಟ್ಟಿ, ಶಶಾಂಕ ಅರ್ನಾಡಿ
ಅರ್ಪಣೆ: ಪ್ರೊ. ರಾಧಾಕೃಷ್ಣ ಎಜುಕೇಶನಲ್ ಫೌಂಡೇಷನ್

ಪಂಡಿತ್ ಪರಮೇಶ್ವರ ಹೆಗಡೆ

ಭಾನುವಾರ ಸಂಜೆ 7 ರಿಂದ
ಹೊನ್ನಾವರದ ಪುಟ್ಟಹಳ್ಳಿ ಕಲ್‌ಬಾಗದಿಂದ ಹರಿದು ಬರಲಿದೆ ರಾಷ್ಟ್ರದ ಹೆಮ್ಮೆಯ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಅವರ ವಚನಾಮೃತ.
ತಬಲಾ: ಗುರುಪ್ರಸಾದ ಹೆಗಡೆ
ಹಾರ್ಮೋನಿಯಂ: ಗೌರೀಶ ಯಾಜಿ

ಸೋಮವಾರ, 26 ಅಕ್ಟೋಬರ್ 2020
ಸಂಜೆ 5.30 ರಿಂದ ವಿಜಯ ದಶಮಿ ವಿಶೇಷ ಸಮೂಹ ನೃತ್ಯ
ಶಕ್ತಿ ದೇವತೆ ಚಾಮುಂಡೇಶ್ವರಿ
ನಿರ್ದೇಶನ ಮತ್ತು ಸಂಯೋಜನೆ: ಗುರು ಡಾ.ಕೃಪಾ ಫಡ್ಕೆ, ಅರ್ಪಣೆ: ನೃತ್ಯಗಿರಿ, ಮೈಸೂರು

ಸಂಜೆ 7 ರಿಂದ 8.20
ವಿಜಯ ದಶಮಿ ನಾಡಿಗೆ ನೆಮ್ಮದಿ ತರಲಿ ಎನ್ನುವ ಆಶಯದ ವಿಶಿಷ್ಟ ಪ್ರಯೋಗ
ನವದುರ್ಗೆಯರ ವಿಶೇಷ ಪ್ರಸ್ತುತಿಯ ಜಯದುರ್ಗೆ
ದೇಶದ ಶ್ರೇಷ್ಠ ನರ್ತಕರ ಮಹಾ ಪ್ರತಿಭೆ ಪ್ರದರ್ಶನ.

ಕಲ್ಪನೆ ಮತ್ತು ಕೋರಿಯೋಗ್ರಫಿ: ಪದ್ಮಶ್ರೀ, ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ಪ್ರಹ್ಲಾದ್, ನಿರ್ಮಾಣ: ಪ್ರಸಿದ್ಧ ಫೌಂಡೇಶನ್

ಪದ್ಮಶ್ರೀ ಹಾಗು ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:
ಭರತ ನಾಟ್ಯಂ: ಪ್ರತಿಭಾ ಪ್ರಹ್ಲಾದ್
ಚಾವ್: ಶಶಿಧರ ಆಚಾರ್ಯ
ಒಡಿಸ್ಸಿ: ರಂಜನಾ ಗೌಹರ್
ಕೂಚುಪುಡಿ: ಜಯರಾಂ ರಾವ್.
ಮಣಿಪುರಿ: ಸಿಂಗ್ ಜಿತ್ ಸಿಂಗ್

ಸಂಘಟಕರು: ಶ್ರೀನಿವಾಸ ಜಿ ಕಪ್ಪಣ್ಣ

ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:
ಕೂಚುಪುಡಿ: ವಾಣಿಶ್ರೀ ರಾವ್
ಮಣಿಪುರಿ: ಚಾವ್ ಮಾಥುರ್
ಕಥಕ್ಕಳಿ: ಸಾಧನಂ ಬಾಲಕೃಷ್ಣ
ಕಥಕ್: ರಾಜೇಂದ್ರ ಗಂಗಾನಿ
ಸತ್ರಿಯ: ಶರೋದಿ ಸೈಕಿಯ
ಹಾಗೂ
ಮೋಹಿನಿ ಆಟ್ಟಂ: ಜಯಪ್ರಭಾ ಮೆನನ್
ಸಂಘಟನೆ: ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.